ಬ್ಯಾರಿ ಭಾಷೆಯ ಪ್ರಬಂಧ/ಗಾದೆ ಸ್ಪರ್ಧೆಗಳಿಗೆ ಆಹ್ವಾನ

Update: 2021-09-22 10:58 GMT

ಮಂಗಳೂರು, ಸೆ.22: ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ವತಿಯಿಂದ ಅ.3ರಂದು ಜರಗುವ ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ಬ್ಯಾರಿ ಭಾಷೆಯಲ್ಲಿ ಪ್ರಬಂಧ ಮತ್ತು ಗಾದೆಯ ಸ್ಪರ್ಧೆಗಳು ನಡೆಯಲಿದೆ.

ಬ್ಯಾರಿ ಭಾಷಾ ಪ್ರಬಂಧ ಸ್ಫರ್ಧೆಯನ್ನು ಪಿಯುಸಿವರೆಗಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಂಬ ಎರಡು ಗುಂಪುಗಳಿಗಾಗಿ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ.

ಪಿಯುಸಿವರೆಗಿನ ವಿದ್ಯಾರ್ಥಿಗಳು 'ಬ್ಯಾರಿ ಬಾಸೆರೊ ಚರಿತ್ರೆ ಪಿನ್ನೆ ಮಹತ್ವ' (ಬ್ಯಾರಿ ಭಾಷೆಯ ಚರಿತ್ರೆ ಮತ್ತು ಮಹತ್ವ) ಮತ್ತು ಡಿಗ್ರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು 'ಪುದಿಯೊ ಶಿಕ್ಷಣ ನೀತಿರೊ ಸಾದಕ ಭಾದಕಙ' (ನೂತನ ಶಿಕ್ಷಣ ನೀತಿಯ ಸಾಧಕ ಬಾಧಕಗಳು)ಎಂಬ ವಿಷಯದಲ್ಲಿ ಪ್ರಬಂಧ ಬ್ಯಾರಿ ಭಾಷೆಯಲ್ಲಿ ಬರೆದು ಕಳಿಸಬೇಕು. ಸಂಗ್ರಹಿತ ಬ್ಯಾರಿ ಭಾಷಾ ಗಾಧೆಗಳ ಸ್ಪರ್ಧೆಗಳನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ. ಸ್ಪರ್ಧಿಗಳು 50 ಬ್ಯಾರಿ ಭಾಷಾ ಗಾದೆಗಳಿಗೆ ಕಡಿಮೆ ಇರದಂತೆ ಗಾದೆಗಳನ್ನು ಸಂಗ್ರಹಿಸಿ ಕಳುಹಿಸಿಕೊಡಬೇಕು.

ಆಸಕ್ತಿ ಇರುವ ಸ್ಪರ್ಧಾಳುಗಳು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್ ಮತ್ತು ಗೌರವಾಧ್ಯಕ್ಷ ಯೂಸುಫ್ ವಕ್ತಾರ್‌ಅವರ ವಾಟ್ಸಾಪ್ ಸಂಖ್ಯೆ 9743700920 / 9008503993 ಹಾಗೂ ಸಂಸ್ಥೆಯ ವಿಳಾಸಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್, ಕ್ಯಾಪಿಟಲ್ ಅವೆನ್ಯೂ, ನೆಲ ಅಂತಸ್ತು, ಸ್ಟೇಟ್‌ಬ್ಯಾಂಕ್ ಬಳಿ ಮಂಗಳೂರು - 575001 ಅಂಚೆ ಮೂಲಕವೂ ಅ.1ರೊಳಗೆ ಕಳುಹಿಸಿ ಕೊಡಬೇಕು.

ಪ್ರತೀ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನವಾಗಿ 2,000 ರೂ., ದ್ವಿತೀಯ ಬಹುಮಾನವಾಗಿ 1000 ರೂ., ತೃತೀಯ ಬಹುಮಾನವಾಗಿ 500 ರೂ. ನಗದು ಪುರಸ್ಕಾರ ನೀಡಲಾಗುವುದು ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ ಶಾಹುಲ್ ಹಮೀದ್ ಮೆಟ್ರೊ ಗುರುಪುರ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News