ಕುದುರೆಮುಖ ಕಾರ್ಮಿಕ ವರ್ಗಕ್ಕೆ ನ್ಯಾಯ:ರಾಕೇಶ್ ಮಲ್ಲಿ

Update: 2021-09-22 10:58 GMT

ಕಾವೂರು, ಸೆ.22: : ಕುದುರೆ ಮುಖ ಅದಿರು ಕಂಪೆನಿ ಕಾರ್ಮಿಕ ಸಂಘಟನೆಗೆನಡೆದ ಚುನಾವಣೆಯಲ್ಲಿ ಇಂಟಕ್ ಸಂಯೋಜಿತ ಕುದ್ರೆಮುಖ ಶ್ರಮಶಕ್ತಿ ಸಂಘಟನೆ (ಕೆಎಸ್‌ಎಸ್‌ಎಸ್) ಜಯಗಳಿಸಿದ್ದು, ವಿಜಯೋತ್ಸವ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಕಾವೂರು ಕುದುರೆಮುಖ ಕಾಲನಿಯ ಸಭಾಂಗಣದಲ್ಲಿ ಸೋಮವಾರ ಜರಗಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಇಂಟಕ್ ಸಂಘಟನೆ ಎನ್‌ಎಂ ಅಡ್ಯಂತಾಯ ಮತ್ತು ರಾಕೇಶ್ ಮಲ್ಲಿ ನೇತೃತ್ವದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಕಾರ್ಮಿಕ ವರ್ಗಕ್ಕೆ ನ್ಯಾಯ ದೊರಕಿಸಿ ಕೊಡುವ ಕೆಲಸವಾಗುತ್ತಿದೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಮಾತನಾಡಿ ಇಂಟಕ್ ಎನ್‌ಎಂಪಿಟಿಯಲ್ಲಿ ನಂ1 ಸ್ಥಾನದಲ್ಲಿದ್ದು,ಇದೀಗ ಕುದುರೆಮುಖ ಕಂಪನಿಯಲ್ಲೂ ತನ್ನ ಪ್ರಾಬಲ್ಯ ತೋರಿಸಿದೆ. ಕುದುರೆಮುಖ ಕಂಪನಿಯನ್ನು ಉಳಿಸುವ ಜತೆ ಜತೆ ಉದ್ಯೋಗ ಭದ್ರತೆ, ಸ್ಥಳೀಯ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಇಂಟಕ್ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಇಂಟಕ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಮಹಾಬಲ ಮಾರ್ಲ, ಪಿ.ಕೆ ಸುರೇಶ್, ಚಿತ್ತರಂಜನ್ ಶೆಟ್ಟಿ, ಐವನ್ ಡಿಸೋಜ , ಕೆಎಸ್‌ಎಸ್‌ಎಸ್‌ನ ಕೆಂಪೇಗೌಡ, ರಾಜ್‌ಗುರು, ಸುರೇಶ್ ಬಾಬು, ಪದ್ಮನಾಭ ಶೆಟ್ಟಿ, ಲಕ್ಷ್ಮಣ್ ಪವರ್, ಉಮಾಪತಿ, ರಮಾನಾಥ್ ಮತ್ತಿತರರು ಉಪಸ್ಥಿತರಿದ್ದರು.

ಮುನಿರಾಜು ಸ್ವಾಗತಿಸಿದರು. ಶ್ರೀನಿವಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಸುವರ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News