ಸೆ.25ರಂದು ಮಂಗಳೂರು ವಿವಿ, ಬಿಐಟಿ, ಬೀಡ್ಸ್ ನಿಂದ 'ಗ್ರೀನ್ ವಾಕಥಾನ್ 2021'

Update: 2021-09-22 15:14 GMT

ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ, ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ( ಬಿಐಟಿ ) ಹಾಗು ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ಗಳು  ವಿಶ್ವ ಹಸಿರು ಕಟ್ಟಡ ಸಪ್ತಾಹದ ಪ್ರಯುಕ್ತ ಸೆ.25 ರಂದು 'ಗ್ರೀನ್ ವಾಕಥಾನ್' ಕಾರ್ಯಕ್ರಮ ಹಮ್ಮಿಕೊಂಡಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ಈ ವಾಕಥಾನ್ ನಡೆಯಲಿದೆ. 

ಮಂಗಳೂರು ವಿಶ್ವವಿಧ್ಯಾನಿಲಯದ ಉಪಕುಲಪತಿ ಡಾ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 7:00 ಗಂಟೆಗೆ  ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ವಾಕಥಾನ್ ಆರಂಭವಾಗಿ ಸಮಾರೋಪ ಬಿಐಟಿ ಕ್ಯಾಂಪಸ್‌ನಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸಸಿ (ಗಿಡ) ನೆಡುವುದರೊಂದಿಗೆ ಸಮಾರೋಪಗೊಳ್ಳಲಿದೆ . 

ಈ ಕಾರ್ಯಕ್ರಮದ ಉದ್ದೇಶವು ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ ಮತ್ತು ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುವುದು. ಬಿಐಟಿ ಮತ್ತು ಬೀಡ್ಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರನ್ನು ಆಹ್ವಾನಿಸುತ್ತದೆ ಎಂದು  ​ಬಿಐಟಿ ಪ್ರಾಂಶುಪಾಲ 
ಡಾ.ಎಸ್.ಐ. ಮಂಜೂ​ರ್ ಬಾಷಾ, ​ ಬೀಡ್ಸ್ ಪ್ರಾಂಶುಪಾಲ ​ಅಶೋಕ್ ಎಲ್ ಪಿ ಮೆಂಡೋನ್ಕಾ, ​​ಬಿಐಟಿ-ಪಾಲಿಟೆಕ್ನಿಕ್​ ಪ್ರಾಂಶುಪಾಲ, ​ಡಾ. ಅಜೀಜ್ ಮುಸ್ತಫಾ, ​ಬಿಐಟಿ ​ಇಸಿಇ ವಿಭಾಗದ ಮುಖ್ಯಸ್ಥ ​ಡಾ. ಅಬ್ದುಲ್ಲಾ ಗುಬ್ಬಿ ​ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News