ಕೋಡಿ ಕಡಲ ತೀರ ಸ್ವಚ್ಛತ ಅಭಿಯಾನದ ಪೂರ್ವಭಾವಿ ಸಭೆ

Update: 2021-09-22 16:40 GMT

ಕುಂದಾಪುರ: ಕೋಡಿ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಕೋಡಿ ಕಡಲ ತೀರ ಸ್ವಚ್ಛತ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಬುಧವಾರ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಹೀಮ್ ಅಧ್ಯಕ್ಷತೆಯಲ್ಲಿ ಜರಗಿತು.

ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಪ್ರಾಸ್ತ್ತಾವಿಕ ವಾಗಿ ಮಾತನಾಡಿ, ಸಂಸ್ಥೆಯ ಚೇರ್‌ಮನ್ ಸೈಯ್ಯದ್ ಮೊಹಮ್ಮದ್ ಬ್ಯಾರಿ ಯವರು ಪರಿಸರದ ಕುರಿತಂತೆ ಪರಿಸರ ಮಾಲಿನ್ಯ ಯಾವ ರೀತಿ ಆಗುತ್ತದೆ ಹಾಗೂ ಅದರ ಸ್ವಚ್ಛತೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಕೋಡಿ ಪರಿಸರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ ಅದೇ ದಿನ ವಿಶ್ವ ಹಸಿರು ಕಟ್ಟಡ ಸಪ್ತಾಹ ಚಾಲನೆ ನೀಡಲಾಗುವುದು ಎಂದರು.

ಈ ಕಾರ್ಯಕ್ರಮ ಮಾ.26ರಂದು ಪೂರ್ವಹ್ನ 7 ಗಂಟೆಗೆ ಪ್ರಾರಂಭಗೊಳ್ಳ ಲಿದೆ. ಬ್ಯಾರಿಸ್ ಸಾಮೂಹ ಸಂಸ್ಥೆಯ 8 ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಪೋಷಕರು, ರಕ್ಷಕರು ಸಹ ಭಾಗವಹಿಸಬೇಕಾಗಿ ಕೋರಲಾಗಿದೆ. ಕುಂದಾಪುರ ಕೋಡಿಯ ಎಲ್ಲಾ ಸಂಘ ಸಂಸ್ಥೆಗಳು, ದೇವಸ್ಥಾನ, ಮಸೀದಿ, ಚರ್ಚ್‌ನವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ದೋಮ ಚಂದ್ರಶೇಖರ್, ಶಿಕ್ಷಕ-ರಕ್ಷಕ ಸಂಘದ ಗೌರವ ಸಲಹೆಗಾರ ಹಾಜಿ ಅಬುಶೇಕ್, ಉಪಾಧ್ಯಕ್ಷೆ ಮುಸ್ತಾರೀನ್, ಕೋಶಾಧಿಕಾರಿ ರಫೀಕ್ ಮೊದಲಾದವರು ಉಪಸ್ಥಿತರಿದ್ದರು. ಮಹಿಮಾ ಕಾರ್ಯಕ್ರಮ ನಿರೂಪಿಸಿರು. ಅಶ್ವಿನಿ ಪ್ರದೀಪ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News