ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅನ್ನಪ್ರಸಾದ ವ್ಯವಸ್ಥೆ ಪ್ರಾರಂಭ

Update: 2021-09-22 17:20 GMT

ಉಡುಪಿ, ಸೆ.22: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರ ಅನುಕೂಲಕ್ಕಾಗಿ ಬೆಳಗ್ಗೆ 6:00ರಿಂದ ಅಲಂಕಾರ ಪೂಜೆಯವರೆಗೆ, ಬಳಿಕ ಸಂಜೆ ಚಾಮರ ಸೇವೆ ಯವರೆಗೆ, ಚಾಮರ ಸೇವೆಯ ನಂತರ ರಾತ್ರಿ 9:00 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

ಅಲ್ಲದೇ ಭಕ್ತಾದಿಗಳಿಗೆ ಅಪರಾಹ್ನ ಹಾಗೂ ರಾತ್ರಿಯ ಅನ್ನಪ್ರಸಾದದ ವ್ಯವಸ್ಥೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಕೋವಿಡ್ ಕಾರಣದಿಂದ ವರ್ಷಕ್ಕೂ ಅಕ ಸಮಯದಿಂದ ಅನ್ನಪ್ರಸಾದ ವ್ಯವಸ್ಥೆಯನ್ನು ಸ್ಥಗಿತ ಗೊಳಿಸಲಾಗಿತ್ತು.

ಮೊದಲ ದಿನವಾದ ಇಂದು ನೂರಾರು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ಸದ್ಯ ರಾಜ್ಯದಲ್ಲಿ ಕೊರೋನ ಹಾವಳಿ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕೃಷ್ಣ ಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೂರದೂರುಗಳಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನಡೆಯುವ ಭೋಜನ ವ್ಯವಸ್ಥೆಯಿಂದ ಬಹಳ ಅನುಕೂಲವಾಗಲಿದೆ. ಹಾಗೂ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News