ನಕಲಿ ಯಕ್ಷಗಾನ ಕಲಾವಿದರಿಗೆ ಧಿಕ್ಕಾರ: ವಿಕಾಸ್ ಹೆಗ್ಡೆ

Update: 2021-09-22 17:22 GMT

ಕುಂದಾಪುರ ಸೆ.22: ರೈತರ ನ್ಯಾಯಯುತ ಹೋರಾಟವನ್ನು ಅಪಹಾಸ್ಯ ಮಾಡುವ ನಕಲಿ ಯಕ್ಷಗಾನ ಕಲಾವಿದರಿಗೆ ನನ್ನ ಧಿಕ್ಕಾರವಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ.ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ನ್ಯಾಯಯುತ ಹೋರಾಟಗಳ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಕೆಲವು ನಕಲಿ ಯಕ್ಷಗಾನ ಕಲಾವಿದರಿಗೆ ಮಾತಿನ ಚಪಲ. ಇವತ್ತು ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಉಳಿದಿದ್ದಿದ್ದರೆ ಅದಕ್ಕೆ ಅತೀ ದೊಡ್ಡ ಪೋಷಕರು ರೈತರೇ ಹೊರತು ಯಾವುದೇ ಕಾರ್ಪೊರೇಟ್ ಕಂಪನಿಯವರು ಅಲ್ಲ. ಟೆಂಟ್ ಹಾಗೂ ಬಯಲು ಎರಡೂ ಮೇಳಗಳ ಮಹಾ ಪೋಷಕರು ರೈತರು. ಇವತ್ತು ದೇವಸ್ಥಾನದ ಮೇಳಗಳ ಶೇ.99ರಷ್ಟು ಹರಕೆ ಬಯಲಾಟ ರೈತರಿಂದಲೇ ಸೇವೆಯ ಮೂಲಕ ನಡೆಯುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News