ಅಕ್ರಮ ಕೋವಿ ಹೊಂದಿದ್ದ ಆರೋಪ: ಓರ್ವನ ಬಂಧನ

Update: 2021-09-22 17:30 GMT

ಬ್ರಹ್ಮಾವರ, ಸೆ.22: ಮನೆಯಲ್ಲಿ ಅಧಿಕೃತ ಕೋವಿ ಜೊತೆಗೆ ಅಕ್ರಮ ಕೋವಿಯನ್ನು ಹೊಂದಿದ್ದ ಆರೋಪಿಯೊಬ್ಬನನ್ನು ಬ್ರಹ್ಮಾವರ ಪೊಲೀಸರು ಸೆ.21ರಂದು ಚೇರ್ಕಾಡಿ ಗ್ರಾಮದ ಬಾಯರ್ಬೆಟ್ಟು ಹಲಗೆ ಗುಂಡಿ ಎಂಬಲ್ಲಿ ಬಂಧಿಸಿದ್ದಾರೆ.

ಹಲಗೆಗುಂಡಿ ನಿವಾಸಿ ಜಯನಾಯ್ಕ ಯಾನೆ ಜಯಂತ ನಾಯ್ಕ(46) ಬಂಧಿತ ಆರೋಪಿ. ಮಹತ್ವದ ಮಾಹಿತಿಯಂತೆ ಜಯ ನಾಯ್ಕ ಮನೆಗೆ ದಾಳಿ ನಡೆಸಿದ ಪೊಲೀಸರು ಶೋಧನೆ ನಡೆಸಿದ್ದು, ಆಗ ಮನೆಯಲ್ಲಿ ಲೈಸನ್ಸ್ ಹೊಂದಿದ ಕೋವಿಯೊಂದಿಗೆ ಅನಧಿಕೃತವಾಗಿ ಇನ್ನೊಂದು ಕೋವಿ ಇರುವುದು ಕಂಡು ಬಂತ್ತೆನ್ನಲಾಗಿದೆ.

ಬಂಧಿತ ಆರೋಪಿಯಿಂದ ಲೈಸೆನ್ಸ್ ಹೊಂದಿದ ಹಾಗೂ ಅಕ್ರಮ ಕೋವಿಗಳು, 22 ಸೀಸದ ಬಾಲ್ಸ್, 5 ಕೇಪು, ಚೂಪಾಗಿರುವ 7 ಸೀಸದ ಭಾಗಗಳು, ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಮಸಿ, ಚೆರಿಯನ್ನು ಹಾಗೂ ಆಯುಧ ಪರವಾನಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 30000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಡಿವೈಎಸ್ಪಿ ಸುಧಾಕರ ನಾಯ್ಕ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ.ಹಾದಿಮನಿ ನೇತೃತ್ವದ ವಿಶೇಷ ತಂಡ ಆರೋಪಿಯನ್ನು ಪತ್ತೆ ಹಚ್ಚಿದೆ. ಇದರಲ್ಲಿ ಮಹಿಳಾ ಪಿಎಸ್ಸೈ ಸುನೀತಾ ಕೆ.ಆರ್., ಸಿಬ್ಬಂದಿ ಪ್ರವೀಣ್ ಶೆಟ್ಟಿಗಾರ್, ವೆಂಕಟ ರಮಣ ದೇವಾಡಿಗ, ಉದಯ ಅಮೀನ್, ದಿಲೀಪ್, ಸಬಿತ, ಪುಷ್ಪಲತಾ, ಚಾಲಕ ಅಣ್ಣಪ್ಪಮತ್ತು ಸಂೋಷ ಕುಮಾರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News