ಕಾಪು: ಪೌರಕಾರ್ಮಿಕರ ದಿನಾಚರಣೆ; ವಿವಿಧ ಸ್ಪರ್ಧೆಗಳು, ಸನ್ಮಾನ

Update: 2021-09-23 13:43 GMT

ಕಾಪು: ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗೆ ವಿವಿಧ ಸ್ಪರ್ಧೆಗಳು, ಸನ್ಮಾನ, ಸಹಭೋಜನದ ಮೂಲಕ ಕಾಪು ಪುರಸಭೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. 

ಪೌರ ಕಾರ್ಮಿಕರಿಗೆ ನಡೆಸಲಾದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ರಾಮ ಮತ್ತು ಬಳಗ ಪ್ರಥಮ ಮತ್ತು ರವಿ ಮತ್ತು ಬಳಗ ದ್ವಿತೀಯ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಉಮೇಶ್, ರವಿ, ಸುಧೀರ್ ಬಹುಮಾನ ಗಳಿಸಿದರು. 30 ಮಂದಿ ಪೌರಕಾರ್ಮಿಕರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಪೌರ ಕಾರ್ಮಿಕರನ್ನು ಸಮ್ಮಾನಿಸಿ, ಗೌರವಿಸಲಾಯಿತು. 

ಕಾರ್ಯಕ್ರಮದ ಬಳಿಕ ನಡೆದ ಸಹಭೋಜನದಲ್ಲಿ ಪೌರಕಾರ್ಮಿಕರಿಗೆ ಸ್ವತಃ ಭೋಜನವನ್ನು ಬಡಿಸುವ ಮೂಲಕ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಸರಳತೆಯನ್ನು ಮೆರೆದರು. 

ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ಅಧೀಕ್ಷಕ ರೋಷನ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಸಫಾಯಿ ಕರ್ಮಾಚಾರಿ ಆಯೋಗ ರಚಿಸಲಾಗಿದ್ದು ಪೌರ ಕಾರ್ಮಿಕರಿಗೆ ಸಮಸ್ಯೆಗಳ ಉಂಟಾದಲ್ಲಿ ಅವರಿಗೆ ಉಚಿತ ಕಾನೂನು ಸಲಹೆ, ಕಾನೂನು ಹೋರಾಟ ನಡೆಸಲು ಅವಕಾಶವಿದೆ ಎಂದರು. 

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೈಲಾ ದೇಶಪಾಂಡೆ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದು ಅದರ ಉಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯಾಧಿಕಾರಿ ದಿನೇಶ್ ಕುಮಾರ್ ಪ್ರಸ್ತಾವನೆಗೈದು ಪೌರ ಕಾರ್ಮಿಕರು ಪುರಸಭೆಯ ಬೆನ್ನೆಲುಬಾಗಿದ್ದು ಅವರನ್ನು ಸೈನಿಕರೆಂದು ಗೌರವಿಸಿದರೂ ತಪ್ಪಿಲ್ಲ. ಕೊರೋನ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಸ್ಮರಣೀಯವಾಗಿದೆ ಎಂದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಮಾತನಾಡಿದರು. ಪೌರ ಕಾರ್ಮಿಕರ ಪರವಾಗಿ ಉಮೇಶ್ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಕಾಪು ಪುರಸಭೆ ಆರೋಗ್ಯಾಧಿಕಾರಿ ದಿನೇಶ್ ಪ್ರಸ್ತಾವನೆಗೈದರು. ಸುನೀಲ್ ಕುಮಾರ್ ಸ್ವಾಗತಿಸಿದರು. ಕಛೇರಿ ವ್ಯವಸ್ಥಾಪಕ ಉರ್ಬನ್ ಡಿ. ಸೋಜ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಸಂಘಟಕ ಬಾಲೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News