ರೊಹಿಂಗ್ಯಾ ವಿರುದ್ಧದ ಹಿಂಸಾಚಾರದ ದಾಖಲೆ ಬಿಡುಗಡೆ: ಫೇಸ್ಬುಕ್ ಗೆ ಅಮೆರಿಕ ನ್ಯಾಯಾಧೀಶರ ಆದೇಶ

Update: 2021-09-23 17:53 GMT

ವಾಷಿಂಗ್ಟನ್, ಸೆ.23: ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾ ವಿರೋಧಿ ಹಿಂಸಾಚಾರಕ್ಕೆ ಸಂಬಂಧಿಸಿದ(ಈಗ ಮುಚ್ಚಲಾಗಿರುವ) ದಾಖಲೆಯನ್ನು ಬಿಡುಗಡೆಗೊಳಿಸುವಂತೆ ಅಮೆರಿಕದ ನ್ಯಾಯಾಧೀಶರು ಸಾಮಾಜಿಕ ಮಾಧ್ಯಮ ಫೇಸ್ಬುಕ್ ಗೆ ಆದೇಶಿಸಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ರೊಹಿಂಗಾ ಅಲ್ಪಸಂಖ್ಯಾತರ ವಿರುದ್ಧಧ ಅಂತರ್ರಾಷ್ಟ್ರೀಯ ಅಪರಾಧದ ಹಿನ್ನೆಲೆಯಲ್ಲಿ ಕಾನೂನುಪ್ರಕ್ರಿಯೆ ಮುಂದುವರಿಸಲು ಅಗತ್ಯವಾಗಿರುವ ದಾಖಲೆಗಳನ್ನು ಒದಗಿಸಲು ವಿಫಲವಾಗಿರುವುದಕ್ಕೆ ವಾಷಿಂಗ್ಟನ್ ಡಿಸಿಯ ನ್ಯಾಯಾಧೀಶರು ಫೇಸ್ಬುಕ್ ಅನ್ನು ಟೀಕಿಸಿದ್ದಾರೆ. ಆದರೆ ದಾಖಲೆ ಬಿಡುಗಡೆಗೆ ನಿರಾಕರಿಸಿರುವ ಫೇಸ್ಬುಕ್, ದಾಖಲೆ ಬಿಡುಗಡೆ ಮಾಡಿದರೆ ಬಳಕೆದಾರರ ಮಾಹಿತಿ ಬಹಿರಂಗಗೊಳಿಸಬಾರದು ಎಂಬ ಅಮೆರಿಕದ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿದೆ. 

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶರು, ಈಗ ಅಳಿಸಿ ಹಾಕಿರುವ ಪೋಸ್ಟ್ಗಳು ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ. ಕಳೆದ 10 ವರ್ಷಗಳಲ್ಲಿ ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾಗಳ ವಿರುದ್ಧ ದ್ವೇಷ ಸಾಧನೆಗೆ ಪೂರಕವಾದ ದ್ವೇಷದ ಸಂದೇಶ, ದ್ವೇಷ ಭಾಷಣವನ್ನು ಪ್ರಸಾರ ಮಾಡಲು ಫೇಸ್ಬುಕ್ ವೇದಿಕೆಯನ್ನು ಬಳಸಲಾಗಿದೆ ಎಂದು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News