ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ
ಉಳ್ಳಾಲ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಉಳ್ಳಾಲ ನಗರ ಸಮಿತಿಯ 2021-2023 ಸಾಲಿನ ನೂತನ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳನ್ನು, ಪಕ್ಷದ ಜಿಲ್ಲಾಧ್ಯಕ್ಷ ಅಡ್ವೊಕೇಟ್ ಸರ್ಫರಾಜ್ ರವರ ಉಸ್ತುವಾರಿಯಲ್ಲಿ ಚುನಾವಣೆ ಮೂಲಕ ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ವೆಲ್ಫೇರ್ ಪಕ್ಷದ ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾಗಿ ಎ.ಕೆ. ತೌಸೀಫ್, ಉಪಾಧ್ಯಕ್ಷರಾಗಿ ರೋಹಿದಾಸ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಗರ್ ಸಿ.ಎಚ್, ಖಜಾಂಚಿಯಾಗಿ ಹುಸೈನ್ ಸ್ಮಾರ್ಟ್ ಸಿಟಿ, ಜೊತೆ ಕಾರ್ಯದರ್ಶಿಯಾಗಿ ರಿಝ್ವಾನ್ ಚೆಂಬುಗುಡ್ಡೆ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿಹಾಬ್ ಕೋಡಿ ಆಯ್ಕೆಯಾದರು.
ತೊಕ್ಕೊಟ್ಟುವಿನಲ್ಲಿರುವ ಪಕ್ಷದ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕರ್ತರ ಚುನಾವಣೆಯ ನಂತರದ ಸರಳ ಸಮಾರಂಭಲ್ಲಿ ನೂತನ ಅಧ್ಯಕ್ಷರು ಮತ್ತು ಹೊಸ ಹೊಣೆಗಾರರಾಗಿ ನಿಯುಕ್ತರಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಫ್ ಕೋಟೆಕಾರ್, ಜಿಲ್ಲಾ ಖಜಾಂಚಿ ಮನ್ಸೂರ್ ಸಿ.ಎಚ್ ಹಾಗೂ ಪಕ್ಷದ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.