ಆಸ್ಟ್ರೇಲಿಯಾ: ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ; ಮಾಜಿ ಪ್ರಾಂಶುಪಾಲೆ ವಿರುದ್ಧ ವಿಚಾರಣೆ ಆರಂಭ

Update: 2021-09-23 18:12 GMT

ಸಿಡ್ನಿ, ಸೆ.23: ಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಿದ ಆರೋಪದಲ್ಲಿ ಮೆಲ್ಬೋರ್ನ್ನ ಶಾಲೆಯೊಂದರ ಮಾಜಿ ಪ್ರಾಂಶುಪಾಲೆ ಮಲ್ಕಾ ಲೀಫರ್ ವಿರುದ್ಧ ಆಸ್ಟ್ರೇಲಿಯಾದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಆರಂಭವಾಗಿದೆ ಎಂದು ವರದಿಯಾಗಿದೆ. ಮೆಲ್ಬೋರ್ನ್ನಲ್ಲಿನ ಅದಾಸ್ ಇಸ್ರೇಲಿ ಎಂಬ ಯೆಹೂದಿ ಶಾಲೆಯಲ್ಲಿ 2004ರಿಂದ 2008ರವರೆಗೆ ಈ ಅಪರಾಧ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಶಾಲೆಯಲ್ಲಿ ಲೀಫರ್ ಧಾರ್ಮಿಕ ಅಧ್ಯಯನ ಶಿಕ್ಷಕಿ ಮತ್ತು ಪ್ರಾಂಶುಪಾಲೆಯಾಗಿದ್ದರು. ‌

ನಿಕೋಲೆ ಮೇಯರ್, ದಸೀ ಎಲ್ರಿಚ್ ಮತ್ತು ಎಲೀ ಸ್ಯಾಪರ್ ಎಂಬ ಮೂವರು ಸಹೋದರಿಯರು ತಮ್ಮ ವಿರುದ್ಧ ಲೀಫರ್ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದರು. ಬಳಿಕ ಇಸ್ರೇಲ್ಗೆ ಪಲಾಯನ ಮಾಡಿದ್ದ ಲೀಫರ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಾಸಿಸುತ್ತಿದ್ದರು. 2012ರಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇವರನ್ನು ಗಡೀಪಾರು ಮಾಡಬೇಕೆಂಬ ಆಸ್ಟ್ರೇಲಿಯಾದ ಕೋರಿಕೆಯನ್ನು ಇಸ್ರೇಲ್ ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಇಸ್ರೇಲ್- ಆಸ್ಟ್ರೇಲಿಯಾ ಅವಳಿ ಪೌರತ್ವ ಹೊಂದಿದ್ದ ಲೀಫರ್ರನ್ನು ಜನವರಿಯಲ್ಲಿ ಆಸ್ಟ್ರೇಲಿಯಾಕ್ಕೆ ಗಡೀಪಾರು ಮಾಡಿ ವಿಚಾರಣೆ ಮುಂದುವರಿಸಲಾಗಿತ್ತು. ಈಕೆಯ ವಿರುದ್ಧ ಆರಂಭದಲ್ಲಿ 74 ಪ್ರಕರಣ ದಾಖಲಾಗಿದ್ದು ಇದರಲ್ಲಿ 4 ಪ್ರಕರಣ ಇಸ್ರೇಲ್ನಲ್ಲಿ ಸಂಭವಿಸಿದ್ದರಿಂದ ಇದರ ವಿಚಾರಣೆ ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News