×
Ad

ಐಟಿ ನಿಯಮಗಳ ಅನುಸಾರ ಟ್ವಿಟ್ಟರ್ ಖಾಯಂ ಅಧಿಕಾರಿಗಳನ್ನು ನೇಮಿಸಿದೆ: ದಿಲ್ಲಿ ಹೈಕೋರ್ಟ್‍ಗೆ ತಿಳಿಸಿದ ಕೇಂದ್ರ

Update: 2021-09-24 12:32 IST

ಹೊಸದಿಲ್ಲಿ: ಭಾರತ ಸರ್ಕಾರ ಜಾರಿಗೊಳಿಸಿರುವ ಹೊಸ ಐಟಿ ನಿಯಮಗಳು 2021ಗೆ ಅನುಸಾರವಾಗಿ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ನಿವಾಸಿ ದೂರುಪರಿಹಾರ ಅಧಿಕಾರಿಯನ್ನು ಟ್ವಿಟ್ಟರ್ ನೇಮಿಸಿದೆ ಎಂದು ದಿಲ್ಲಿ ಹೈಕೋರ್ಟ್‍ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಟ್ವಿಟ್ಟರ್ ಇಂಡಿಯಾ ಮತ್ತು ಟ್ವಿಟ್ಟರ್ ಇಂಕ್. ಭಾರತದ ಹೊಸ ಐಟಿ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿ ದಿಲ್ಲಿ ಹೈಕೋರ್ಟ್ ವಕೀಲ ಅಮಿತ್ ಆಚಾರ್ಯ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಈಗ ಅಫಿಡವಿಟ್ ಸಲ್ಲಿಸಿದೆ.

ಐಟಿ ನಿಯಮಗಳು ಈ ನೆಲದ ಕಾನೂನು ಹಾಗೂ ಅದನ್ನು ಟ್ವಿಟ್ಟರ್ ಕಡ್ಡಾಯವಾಗಿ ಪಾಲಿಸಬೇಕು ಎಂದಿರುವ ಕೇಂದ್ರ, ಮೇಲೆ ತಿಳಿಸಲಾದ ಅಧಿಕಾರಿಗಳನ್ನು ಟ್ವಿಟ್ಟರ್ ಉದ್ಯೋಗಿಗಳಾಗಿಯೇ ನೇಮಕಗೊಳಿಸಲಾಗಿದೆ ಹಾಗೂ ತಾತ್ಕಾಲಿಕ ಉದ್ಯೋಗಿಗಳಾಗಲ್ಲ ಎಂದು ಅಫಿಟವಿಟ್‍ನಲ್ಲಿ ತಿಳಿಸಿದೆಯಲ್ಲದೆ ಟ್ವಿಟ್ಟರ್ ತಾನು ನೇಮಕ ಮಾಡಿದ ಅಧಿಕಾರಿಗಳು ಮತ್ತು ಅವರ ಹುದ್ದೆಗಳ ಕುರಿತು ಮಾಹಿತಿ ನೀಡಿದೆ ಎಂದು ಹೇಳಿದೆ. ಟ್ವಿಟ್ಟರ್ ಪರ ವಕೀಲ ಸಾಜನ್ ಪೂವಯ್ಯ ತಮ್ಮ ವಾದ ಮಂಡಿಸಿ ಟ್ವಿಟ್ಟರ್ ಆಗಸ್ಟ್ 4ರಿಂದ ಜಾರಿಗೆ ಬರುವಂತೆ ಖಾಯಂ ಉದ್ಯೋಗಿಗಳನ್ನು ಮೇಲಿನ ಹುದ್ದೆಗಳಿಗೆ ನೇಮಿಸಿದೆ ಎಂದು ಹೇಳಿದ್ದಾರೆ.

ಮುಂದಿನ ವಿಚಾರಣೆ ಅಕ್ಟೋಬರ್ 5ಕ್ಕೆ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News