×
Ad

ಬುರ್ಹಾನ್‌ಪುರ ಮುಖ್ಯ ವೈದ್ಯಕೀಯ , ಆರೋಗ್ಯ ಅಧಿಕಾರಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಮಧ್ಯಪ್ರದೇಶ

Update: 2021-09-24 13:07 IST

ಭೋಪಾಲ್: ಎರಡು ವರ್ಷಗಳ ಅವಧಿಯಲ್ಲಿ ನೀಡಲಾದ ಆದೇಶಗಳನ್ನು ನಿರಂತರವಾಗಿ ಅನುಸರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಧ್ಯಪ್ರದೇಶ ರಾಜ್ಯ ಮಾಹಿತಿ ಆಯೋಗವು ಬುರ್ಹಾನ್ಪುರ ಜಿಲ್ಲೆ ಮುಖ್ಯ ವೈದ್ಯಕೀಯ ಹಾಗೂ  ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ. ವಿಕ್ರಮ್ ಸಿಂಗ್ ವರ್ಮಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

ಇದರ ಜೊತೆಗೆ, ಆಯೋಗವು ಆರೋಗ್ಯ ಸೇವೆಗಳ ನಿರ್ದೇಶಕರಾದ ಆಕಾಶ್ ತ್ರಿಪಾಠಿ ಅವರ ಮೇಲೆ ಶಿಸ್ತು ಕ್ರಮಕ್ಕೆ ನೋಟಿಸ್ ನೀಡಿದೆ ಹಾಗೂ  ರಾಜ್ಯ ಮಾಹಿತಿ ಆಯೋಗದ ಆದೇಶಗಳಿಗೆ  ‘ನಿರ್ಲಕ್ಷ್ಯ’ತೋರಿಸಿದ ಕಾರಣಕ್ಕಾಗಿ ಖುದ್ದಾಗಿ ಹಾಜರುಪಡಿಸಲು ಸಮನ್ಸ್ ನೀಡಿದೆ.

ಆರು ಪುಟಗಳ  ಬಂಧನ ವಾರಂಟ್ ಹಾಗೂ  ಶೋಕಾಸ್ ನೋಟಿಸ್ ಅನ್ನು ರಾಜ್ಯ ಮಾಹಿತಿ ಆಯುಕ್ತ ರಾಹುಲ್ ಸಿಂಗ್ ಸೆಪ್ಟೆಂಬರ್ 21 ರಂದು ಹೊರಡಿಸಿದ್ದಾರೆ.

ಆರ್‌ಟಿಐ (ಮಾಹಿತಿ ಹಕ್ಕು) ಅರ್ಜಿದಾರರಾದ ಸದಾಶಿವ ಸೋನ್ವಾನೆ ಅವರು ಆಗಸ್ಟ್ 10, 2017 ರಂದು ಸಿಎಮ್‌ಎಚ್‌ಒ ಬುರ್ಹಾನ್‌ಪುರಕ್ಕೆ ಅರ್ಜಿ ಸಲ್ಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸೋನ್‌ವಾನೆ ಅವರು  ಬುರ್ಹಾನ್‌ಪುರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಚಾಲಕರ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿದ್ದರು. ಆದರೆ ಆರ್‌ಟಿಐ ಅರ್ಜಿಗೆ ವರ್ಮಾ ನಿಗದಿತ 30 ದಿನಗಳಲ್ಲಿ ಪ್ರತಿಕ್ರಿಯಿಸಲಿಲ್ಲ.

ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಪಿಐಒ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಆರ್‌ಟಿಐ ಅರ್ಜಿದಾರರು ಮೊದಲ ಮನವಿಯನ್ನು ಸಲ್ಲಿಸಿದರು, ಅಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರವು ಅಕ್ಟೋಬರ್ 7, 2017 ರಂದು ವರ್ಮಾ ಅವರಿಗೆ ಸೋನ್‌ವಾನ್‌ಗೆ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆದೇಶಿಸಿತು. ಆದರೆ ಈ ಆದೇಶದ ಹೊರತಾಗಿಯೂ, ಸಿಎನ್‌ಎಚ್‌ಒ ಸೋನ್‌ವಾನ್‌ಗೆ ಮಾಹಿತಿ ನೀಡಲು ನಿರಾಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News