3.25 ಕೋಟಿ ರೂ. ವೆಚ್ಚದ ಎನ್ ಎಂಪಿಟಿ ನೂತನ ಪ್ರವೇಶ ದ್ವಾರಕ್ಕೆ ಶಿಲಾನ್ಯಾಸ
Update: 2021-09-24 14:06 IST
ಮಂಗಳೂರು, ಸೆ.24: ನವ ಮಂಗಳೂರು ಬಂದರು ಮಂಡಳಿ(ಎನ್ ಎಂಪಿಟಿ)ಯ ನೂತನ ಪ್ರವೇಶ ದ್ವಾರಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿತು.
ಕೇಂದ್ರ ಬಂದರು, ಶಿಪ್ಪಿಂಗ್, ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಇಂದು ಎನ್ಎಂಪಿಟಿ ಆವರಣದಲ್ಲಿ ಪ್ರವೇಶ ದ್ವಾರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರವೇಶ ದ್ವಾರ 1100 ಚದರ ಅಡಿ ವಿಸ್ತೀರ್ಣ ದಲ್ಲಿ 3.25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ವಾಗಲಿದೆ.ಈ ಪ್ರವೇಶ ದ್ವಾರ ಎರಡು ಪಥದಪ್ರವೇಶ ಹಾಗೂ ಎರಡು ಪಥದ ನಿರ್ಗಮನ ದ್ವಾರ ಸೇರಿದಂತೆ ನಾಲ್ಕು ಪಥದ ರಸ್ತೆ ಗಳನ್ನು ಹೊಂದಿದೆ.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ನವಮಂಗಳೂರು ಬಂದರು ಮಂಡಳಿಯ ಅಧ್ಯಕ್ಷ ಎ.ವಿ.ರಮಣ್ ಮೊದಲಾದವರು ಉಪಸ್ಥಿತರಿದ್ದರು.