×
Ad

ದಿಲ್ಲಿ:10 ಕೋಟಿ ರೂ. ಮೌಲ್ಯದ ಹೆರಾಯಿನ್‌ನೊಂದಿಗೆ ಮೂವರು ಆಫ್ರಿಕನ್ ಪ್ರಜೆಗಳ ಬಂಧನ

Update: 2021-09-24 17:22 IST

ಹೊಸದಿಲ್ಲಿ: 10 ಕೋಟಿ ಮೌಲ್ಯದ ಹೆರಾಯಿನ್ ಹೊಂದಿದ್ದ ಮೂವರು ಆಫ್ರಿಕನ್ ಪ್ರಜೆಗಳನ್ನು ಗುರುವಾರ ರಾಷ್ಟ್ರ ರಾಜಧಾನಿ ದ್ವಾರಕಾದಲ್ಲಿ ಬಂಧಿಸಲಾಗಿದೆ.

ಆಫ್ರಿಕಾ ಖಂಡದಿಂದ ಬಾಂಗ್ಲಾದೇಶ ಹಾಗೂ  ನೇಪಾಳದ ಮೂಲಕ ಭಾರತಕ್ಕೆ ಹೆರಾಯಿನ್  ಕಳ್ಳಸಾಗಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್‌ಗಳಾದ ಸುಭಾಷ್ ಚಂದ್ ಹಾಗೂ  ರೋಷನ್ ಲಾಲ್ ಅವರು ಆಫ್ರಿಕಾದ ಮಹಿಳೆಯೊಬ್ಬರಿಂದ ಉತ್ತಮ್ ನಗರದ ಮೆಟ್ರೋ ಪಿಲ್ಲರ್ ಸಂಖ್ಯೆ 701 ಬಳಿ ಡ್ರಗ್ಸ್  ಪೂರೈಕೆಯ ಬಗ್ಗೆ ಸುಳಿವು ಪಡೆದರು. ಎಸಿಪಿ ವಿಜಯ್ ಯಾದವ್ ನೇತೃತ್ವದ ತಂಡವನ್ನು ರಚಿಸಲಾಯಿತು ಹಾಗೂ  ಬಲೆ ಬೀಸಲಾಯಿತು ಎಂದು ಡಿಸಿಪಿ ಸಂತೋಷ್ ಮೀನಾ ಹೇಳಿದ್ದಾರೆ.

362 ಗ್ರಾಂ ಹೆರಾಯಿನ್‌ನೊಂದಿಗೆ ಏಂಜೆಲ್ಲಾ (29) ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಆಕೆ  ಐದು ತಿಂಗಳ ವೈದ್ಯಕೀಯ ವೀಸಾದಲ್ಲಿ ಸೆಪ್ಟೆಂಬರ್ 2017 ರಲ್ಲಿ ಭಾರತಕ್ಕೆ ಬಂದಿದ್ದಾಗಿ, ಉತ್ತಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಗಿ ತಿಳಿಸಿದ್ದಾಳೆ  ಎಂದು ಪೊಲೀಸರು ಹೇಳಿದ್ದಾರೆ.

‘’ಮಹಿಳೆ ನೀಡಿದ ಮಾಹಿತಿಯ ಮೇರೆಗೆ  ಉತ್ತಮ್ ನಗರದಿಂದ 345 ಗ್ರಾಂ ಡ್ರಗ್ಸ್‌ನೊಂದಿಗೆ ಇಫೆಡಿ ಎಂಬಾತನ್ನು ಬಂಧಿಸಲಾಯಿತು. ಇಫೆಡಿ ತನ್ನ ಮೂರನೇ ಸಹವರ್ತಿ ಉಚೆ ಡಿಕೆ, ಗ್ಯಾಂಗ್‌ನ ಕಿಂಗ್ ಪಿನ್ ಗುರುತು ಬಹಿರಂಗಪಡಿಸಿದ. ಆತನನ್ನು 104 ಗ್ರಾಂ ಹೆರಾಯಿನ್‌ನೊಂದಿಗೆ ಬಂಧಿಸಲಾಗಿದೆ’’ ಎಂದು ಡಿಸಿಪಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News