×
Ad

ತನ್ನ ಆಹಾರ ಸ್ಟಾಲ್ ಸಮೀಪ ಮಲ ವಿಸರ್ಜನೆಗೈದ ಬೀದಿನಾಯಿಗಳನ್ನು ವಿಷವಿಕ್ಕಿ ಕೊಂದ ವ್ಯಕ್ತಿಯ ಬಂಧನ

Update: 2021-09-24 17:25 IST
ಸಾಂದರ್ಭಿಕ ಚಿತ್ರ 

ಭುಬನೇಶ್ವರ್: ಕಟಕ್ ಜಿಲ್ಲೆಯ ಶಂಕರಪುರ್ ಗ್ರಾಮದಲ್ಲಿರುವ ತನ್ನ ಆಹಾರ ಸ್ಟಾಲ್‍ನ ಒಲೆಯ ಸಮೀಪ ನಾಯಿಗಳು ಮಲವಿಸರ್ಜಿಸಿದ್ದರಿಂದ  ಕೆಂಡಾಮಂಡಲವಾದ ಸ್ಟಾಲ್‍ನ ಮಾಲಕ ಕನಿಷ್ಠ 20 ಬೀದಿನಾಯಿಗಳಿಗೆ ವಿಷವಿಕ್ಕಿದ್ದಾನೆಂದು ಅಕ್ಕಪಕ್ಕದ ಅಂಗಡಿಗಳವರು ದೂರಿದ ನಂತರ ಪ್ರಾಣಿ ಹಿಂಸೆ ನೀಡಿದ ಆರೋಪದ ಮೇಲೆ ಸ್ಟಾಲ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಅಜಯ್ ಕುಮಾರ್ ಸಾಹು ಎಂದು ಗುರುತಿಸಲಾಗಿದೆ. ಮೂರು ದಿನಗಳ ಅಂತರದಲ್ಲಿ 20 ಬೀದಿನಾಯಿಗಳು ಸಾವನ್ನಪ್ಪಿದ್ದನ್ನು ಕಂಡ ಗ್ರಾಮಸ್ಥರು ಏನೋ ತಪ್ಪು ನಡೆದಿದೆ ಎಂದು ತಿಳಿದಿದ್ದರು. ಈ ನಾಯಿಗಳು ಸದಾ ಸಾಹುವಿನ ಫುಡ್ ಸ್ಟಾಲ್ ಸಮೀಪವೇ ಅಡ್ಡಾಡುತ್ತಿದ್ದವು. ಗ್ರಾಮಸ್ಥರು ಪ್ರಶ್ನಿಸಿದಾಗ ತಾನು ಕೀಟನಾಶಕವನ್ನು ಸಿಹಿತಿಂಡಿಗೆ ಮಿಶ್ರಣ ಮಾಡಿ ನಾಯಿಗಳಿಗೆ ನೀಡಿದ್ದಾಗಿ ಹೇಳಿದ ಸಾಹು ಗ್ರಾಮಸ್ಥರಿಗೆ ಬೆದರಿಸಿದ್ದ. ನಂತರ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News