ಬಿಹಾರ: ಸರಕಾರಿ ಭೂಮಿ ಅತಿಕ್ರಮಣ ಕುರಿತು ವಿವರ ಕೋರಿದ್ದ ಆರ್‌ಟಿಐ ಕಾರ್ಯಕರ್ತನ ಹತ್ಯೆ

Update: 2021-09-24 13:36 GMT

ಪಾಟ್ನಾ: ಸರಕಾರಿ ಭೂಮಿ ಅತಿಕ್ರಮಣ ಕುರಿತು ವಿವರ ಕೋರಿ ಸುಮಾರು 90 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದ ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ಶುಕ್ರವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಹರ್ಸಿದ್ದಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು The Indian Express ವರದಿ ಮಾಡಿದೆ.

ಹರ್ಸಿದ್ಧಿ ಬ್ಲಾಕ್ ಕಚೇರಿ ಬಳಿ ಬೆಳಿಗ್ಗೆ 11.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಬಿಪಿನ್ ಅಗರವಾಲ್ (45) ಅವರನ್ನು ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಹರ್ಸಿದ್ದಿಯಲ್ಲಿ ಸರಕಾರಿ ಭೂಮಿ ಒತ್ತುವರಿ ಕುರಿತು ವಿವರ ಕೇಳಿದ್ದ ಅಗರವಾಲ್ ಮೇಲೆ ಈ ಹಿಂದೆಯೂ ದಾಳಿ ನಡೆಸಲಾಗಿತ್ತು. ಅವರು ಇತ್ತೀಚೆಗೆ ರಕ್ಷಣೆಗಾಗಿ ಪೊಲೀಸರನ್ನು ಸಂಪರ್ಕಿಸಿದ್ದರು.

ಈ ಸುದ್ದಿಗೆ ಪ್ರತಿಕ್ರಿಯಿಸಿದ ನಾಗರಿಕ್ ಅಧಿಕಾರ್ ಮಂಚ್ ಸಂಚಾಲಕ ಹಾಗೂ  ಪ್ರಮುಖ ಆರ್‌ಟಿಐ ಕಾರ್ಯಕರ್ತ ಶಿವಪ್ರಕಾಶ್ ರೈ "ಭೂ ಅತಿಕ್ರಮಣಕಾರರನ್ನು ಬಹಿರಂಗಪಡಿಸಲು ಅಗರವಾಲ್ ಹಲವಾರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ ... ರಾಜ್ಯದಲ್ಲಿ ಆರ್‌ಟಿಐ ಕಾರ್ಯಕರ್ತರನ್ನು ಹೇಗೆ ಗುರಿಯಾಗಿಸಲಾಗಿದೆ ಎಂಬುದನ್ನು ನೋಡುವುದು ತುಂಬಾ ದುರದೃಷ್ಟಕರ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News