ಕೋಣಾಜೆ: ಎನ್‌ಎಸ್‌ಯುಐ ನಿಂದ ಪ್ರತಿಭಟನೆ; ಬಂಧನ- ಬಿಡುಗಡೆ

Update: 2021-09-24 12:24 GMT

ಮಂಗಳೂರು, ಸೆ.24: ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಹಾಗೂ ಆರನೇ ಸೆಮಿಸ್ಟರ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಎನ್.ಎಸ್.ಯು.ಐ ದಕ್ಷಿಣ ಘಟಕದ ವತಿಯಿಂದ ಇಂದು ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಯಿತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಬೇಕು. ಪ್ರಸಕ್ತ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಎನ್.ಎಸ್.ಯು.ಐ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಪವನ್ ಸಾಲ್ಯಾನ್, ಯುವ ಮುಖಂಡ ನೌಫಲ್ ಅಬ್ದುಲ್ಲಾ, ಜಿಲ್ಲಾ ಪದಾಧಿಕಾರಿಗಳಾದ ನಿಖಿಲ್ ಶೆಟ್ಟಿ, ಶೋನಿತ್ ಬಂಗೇರ, ಶಾನ್ ಸಿರಿ, ರಿಲ್ವಾನ್ ಅಮ್ಮೆಮ್ಮಾರ್, ಅಬ್ದುಲ್ ರಾಝೀ, ಅಯಾನ್, ಎನ್.ಎಸ್.ಯು.ಐ ಪುತೂತಿರು ತಾಲೂಕು ಅಧ್ಯಕ್ಷ ಕೌಶಿಕ್ ಗೌಡ ಕುದ್ವಾ, ಉಳ್ಳಾಲ ಘಟಕದ ಅಧ್ಯಕ್ಷ ಅಹ್ನಾಫ್ ಡೀಲ್ಸ್ ಉಪಸ್ಥಿತರಿದ್ದರು.

ಪ್ರತಿಭಟನೆ ನಿರತ ವಿದ್ಯಾರ್ಥಿ ನಾಯಕರನ್ನು ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News