ಡಾನ್ ಬಾಸ್ಕೋ ಹಾಲ್‌ನ ನವೀಕೃತ ಕಟ್ಟಡ ಉದ್ಘಾಟನೆ

Update: 2021-09-24 12:31 GMT

ಮಂಗಳೂರು, ಸೆ.24 ಸುಮಾರು 77 ವರ್ಷಗಳ ಹಳೆಯದಾದ ನಗರದ ಜ್ಯೋತಿ ಸಮೀಪದ ಡಾನ್ ಬಾಸ್ಕೋ ಹಾಲ್‌ನ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಫಾ. ಸಿಪ್ರಿಯನ್ ಡಿಸೋಜ ಆಶೀವಚನ ನೀಡಿದರು. ಕೊಂಕ್ಣಿ ನಾಟಕ ಸಭಾದ ಅಧ್ಯಕ್ಷ ಪಾವ್ಲೃ್ ಮೆಲ್ವಿನ್ ಡಿಸೋಜ ನೂತನ ಕಚೇರಿ ಉದ್ಘಾಟಿಸಿದರು. ದಾನಿ ಸಂತೋಷ್ ಸಿಕ್ವೇರಾ ನೂತನ ಸಾಂಸ್ಕೃತಿಕ ಮಿನಿ ಹಾಲ್ ಉದ್ಘಾಟಿಸಿದರು. ಮಂಗಳೂರು ಧರ್ಮ ಪ್ರಾಂತದ ಪಿಆರ್‌ಒ ರೋಯ್ ಕಾಸ್ತೆಲಿನೊ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿ ಕೊಂಕ್ಣಿ ನಾಟಕ ಸಭಾದ ಸಾಂಸ್ಕೃತಿಕ ಚಟುವಟಿಕೆಗಳು ಪುನರಾರಂಭವು ಕಲಾವಿದರಿಗೆ ಖುಷಿ ನೀಡಲಿದೆ. ಕೊಂಕ್ಣಿ ನಾಟಕ ಸಭಾವು ಕಳೆದ ಎಪ್ಪತ್ತು ವರ್ಷಗಳಲ್ಲಿ ಡಾನ್ ಬೊಸ್ಕೊ ಹಾಲ್ ಮುಖಾಂತರ ಮಾಡಿದ ಕಲಾ ಸೇವೆಯು ಅಪಾರ. ಹಾಲಿ ಸಮಿತಿಯು ಈ ಹಳೆಯ ಕಟ್ಟಡವನ್ನು ನವೀಕರಿಸಿರುವುದು ಶ್ಲಾಘನೀಯ ಎಂದರು.

ಉಪಾಧ್ಯಕ್ಷ ಲಿಸ್ಟನ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಫ್ಲೊಯ್ಡೊ ಡಿಮೆಲ್ಲೊ, ಪತ್ರಕರ್ತ ರೇಮಂಡ್ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಜೆರಾಲ್ಡ್ ಕೊನ್ಸೆಸೊ ವಂದಿಸಿದರು. ಸಹ ಕಾರ್ಯದರ್ಶಿ ಪ್ರವೀಣ್ ರೊಡ್ರಿಗಸ್, ಸದಸ್ಯರಾದ ಕ್ಲೀಟಸ್ ಲೋಬೊ, ಮ್ಯಾನೇಜರ್ ಬೊನಿಫಾಸ್ ಪಿಂಟೊ, ಸಹಾಯಕಿ ಶಾಲೆಟ್ ಪಿಂಟೊ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News