×
Ad

ಸೆ.25ರಂದು ‘ರತ್ನಶ್ರೀ ಆರೋಗ್ಯಧಾಮ’ ಲೋಕಾರ್ಪಣೆ

Update: 2021-09-24 18:42 IST

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಸ್ಪತ್ರೆಯ ಆವರಣ ದಲ್ಲಿ ನಿರ್ಮಿಸಲಾಗಿರುವ ಸರ್ವಸುಸಜ್ಜಿತ ಆಸ್ಪತ್ರೆ ‘ರತ್ನಶ್ರೀ ಆರೋಗ್ಯಧಾಮ’ ಇದರ ಉದ್ಘಾಟನಾ ಸಮಾರಂಭವು ಸೆ.25ರ ಬೆಳಗ್ಗೆ 9.30ಕ್ಕೆ ಜರಗಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎನ್., 122 ಬೆಡ್‌ಗಳ ರತ್ನಶ್ರೀ ಆರೋಗ್ಯಧಾಮದಲ್ಲಿ ಸೂಟ್ಸ್, ಡಿಲೆಕ್ಸ್, ಸ್ಪೆಶಲ್ ರೂಮ್, ಧ್ಯಾನ ಮಂದಿರ, ಇಎನ್‌ಟಿ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ, ಶೃಂಗಾರ ಕೇಂದ್ರ, ಯೋಗ ಕೇಂದ್ರ, ಗರ್ಭ ಸಂಸ್ಕಾರ ಮತ್ತು ಬಂಜೆತನ ಚಿಕತ್ಸಾ ಘಟಕ ಸೇರಿದಂತೆ ವಿವಿಧ ಸೇವೆಗಳು ದೊರೆಯಲಿವೆ ಎಂದರು.

ಆರೋಗ್ಯಧಾಮವನ್ನು ಕೇಂದ್ರ ಬಂದರು, ಹಡಗು ಮತ್ತು ಜಲ ಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಉದ್ಘಾಟಿಸಲಿರುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರಸ್ವತಿ ಮೂರ್ತಿಯನ್ನು, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಡಿಲೆಕ್ಸ್ ವಾರ್ಡ್ ಹೆಲ್ತ್ ಕಾಟೇಜ್, ಇಂಧನ ಸಚಿವ ವಿ.ಸುನೀಲ್ ಕುಮಾರ್ ಧ್ಯಾನ ಮಂದಿರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶೃಂಗಾರ-ಆಸ್ಥಿಕ್ ಮೆಡಿಶಿನ್, ಶಾಸಕ ಕೆ. ರಘುಪತಿ ಭಟ್ ಪಂಚಕರ್ಮ ಚಿಕಿತ್ಸೆ ಕೇಂದ್ರ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪೆಷಲ್ ವಾರ್ಡ್‌ನ್ನು ಉದ್ಘಾಟಿಸಲಿರವರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಂನ ವೈದ್ಯೆ ಡಾ.ಚೈತ್ರಾ ಹೆಬ್ಬಾರ್, ಪಿಆರ್‌ಒ ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News