ಎಸ್‌ಎಂಎ ಉಡುಪಿ ಜಿಲ್ಲಾಧ್ಯಕ್ಷರಾಗಿ ಮನ್ಸೂರು ಕೋಡಿ ಆಯ್ಕೆ
ಉಡುಪಿ, ಸೆ.24: ರಾಜ್ಯದ ಮಸೀದಿ ಹಾಗೂ ಮದ್ರಸಗಳ ಆಡಳಿತ ಸಮಿತಿ ಸದಸ್ಯರು ಹಾಗೂ ಧಾರ್ಮಿಕ ಅಧ್ಯಾಪಕರನ್ನೊಳಗೊಂಡ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್(ಎಸ್.ಎಂ.ಎ.) ಉಡುಪಿ ಜಿಲ್ಲಾ ಘಟಕದ 2018-2021ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾಪು ಜೆ.ಸಿ. ಭವನದಲ್ಲಿ ಜರಗಿತು.
ಜಿಲ್ಲಾಧ್ಯಕ್ಷ ಮನ್ಸೂರು ಕೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಜ್ಯ ಉಪಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ ಸುರಿಬೈಲು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಅಬ್ದುರ್ರಹೀಂ ಹೊಸ್ಮಾರು ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
2021-24ನೆ ಸಾಲಿನ ಅಧ್ಯಕ್ಷರಾಗಿ ಮನ್ಸೂರು ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೊಂಬಾಳಿ ಕೆ.ಎಂ.ಎಚ್.ಝುಹುರಿ, ಕೋಶಾಧಿಕಾರಿಯಾಗಿ ಬಾವಾ ಹಾಜಿ ಮೂಳೂರು, ಉಪಾಧ್ಯಕ್ಷರುಗಳಾಗಿ ಅಬೂಬಕರ್ ಮುಸ್ಲಿಯಾರ್ ಕನ್ನಂಗಾರು, ಅಬ್ದುಲ್ಲತೀಫ್ ಸಾಣೂರು, ಖಲಂದರ್ ಸಿಟಿ ಕುಂದಾಪುರ, ಉಸ್ಮಾನ್ ಮದನಿ ನೇಜಾರು, ಕಾರ್ಯದರ್ಶಿಗಳಾಗಿ ಎನ್.ಸಿ. ಅಬ್ದುರ್ರಹೀಂ ಹೊಸ್ಮಾರು, ಎಸ್.ಎಂ.ಹನೀಫ್ ಸಅದಿ ನಾವುಂದ, ಅಯ್ಯೂಬ್ ಮಾಣಿಕೊಳಲು, ಅಬ್ದುಲ್ಲತೀಫ್ ಸಅದಿ ಮೂಳೂರು, ಕಾರ್ಯಕಾರಿ ಸದಸ್ಯ ರಾಗಿ ಯೂಸುಫ್ ಮಾವಿನಕಟ್ಟೆ, ಅಶ್ರಫ್ ಮುಸ್ಲಿಯಾರ್ ಹಂಗಳೂರು, ಇಬ್ರಾಹಿಂ ಸಖಾಫಿ ಕಟಪಾಡಿ, ಹುಸೈನ್ ಕೋಟ, ಅಬ್ದುರ್ರಹ್ಮಾನ್ ಐಡಿಯಲ್, ಸುಲೈಮಾನ್ ಹಾಜಿ ಬಜಗೋಳಿ, ಅಬ್ದುರ್ರಶೀದ್ ಸಖಾಫಿ ಮಜೂರು, ಮೊಯಿದೀನ್ ಹಾಜಿ ಗುಡ್ವಿಲ್, ಅಬ್ದುಲ್ ಬಾರಿ ಮುಸ್ಲಿಯಾರ್, ಅಬ್ದುಲ್ ಮಜೀದ್ ಹನೀಫಿ ಕಾು ಅವರನ್ನು ಆಯ್ಕೆ ಮಾಡಲಾಯಿತು.