×
Ad

ವಿಶು ಶೆಟ್ಟಿಯ ಲಾಕ್‌ಡೌನ್ ಅನ್ನದಾನ ಸಮಾರೋಪ

Update: 2021-09-24 18:51 IST

ಉಡುಪಿ ಸೆ.24: ಉಡುಪಿ ಕೃಷ್ಣ ಮಠದಲ್ಲಿ ಅನ್ನದಾನ ಪ್ರಾರಂಭವಾದ ಹಿನ್ನೆಲೆಯಲ್ಲಿ ಕೊರೊನ 2ನೇ ಲಾಕ್‌ಡೌನ್‌ನಲ್ಲಿ ಆರಂಭಿಸಲಾದ ಅಸಹಾಯಕ ವೃದ್ಧರು ಅಂಗವಿಕಲರು ಮಾನಸಿಕ ರೋಗಿಗಳಿಗೆ ಊಟ ನೀಡುವ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರ ಅನ್ನದಾನ ಕಾರ್ಯಕ್ರಮವನ್ನು ಸೆ.23ರಂದು ಸಮಾಪ್ತಿಗೊಳಿಸಲಾಯಿತು.

ಹಿರಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಮೀನ್ ಮಧ್ವ ನಗರ ಮಾತ ನಾಡಿ ಎ.24ರಂದು ಲಾಕ್‌ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಬೆಳಗಿನ ಉಪಾಹಾರ ಮದ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿತ್ತು ಎಂದರು.

ರಾತ್ರಿಯ ಊಟ ವಿತರಣೆಗೆ ಕೃಷ್ಣ ಅಮೀನ್ ಮಧ್ವನಗರ ಹಾಗೂ ಗೋವಾ ಬೇಕರಿಯ ಹೆರಾಲ್ಡ್ ಸಹಕಾರ ನೀಡಿದ್ದರು. ಸುಂದರ್ ಪೂಜಾರಿ ಮಧ್ವ ನಗರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News