ಯುಪಿಎಸ್ ಸಿ ಸಿವಿಲ್ ಸರ್ವಿಸ್ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ: ಶುಭಂ ಕುಮಾರ್ ಗೆ ಮೊದಲ ಸ್ಥಾನ

Update: 2021-09-24 15:00 GMT

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ನಾಗರಿಕ ಸೇವೆಗಳ (ಸಿಎಸ್‌ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಶುಕ್ರವಾರ ಘೋಷಿಸಿತು.

ಶುಭಂ ಕುಮಾರ್ ನಾಗರಿಕ ಸೇವೆ (ಮುಖ್ಯ) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ಜಾಗೃತಿ ಅವಸ್ಥಿ ದ್ವಿತೀಯ ಸ್ಥಾನ ಹಾಗೂ ಅಂಕಿತಾ ಜೈನ್ (ಶ್ರೇಣಿ 3) ಮೂರನೇ ಸ್ಥಾನ ಪಡೆದರು ಎಂದು ಯುಪಿಎಸ್ ಸಿ ತಿಳಿಸಿದೆ.

2021 ರ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಡೆದ ಲಿಖಿತ ಪರೀಕ್ಷೆ ಹಾಗೂ  ವ್ಯಕ್ತಿತ್ವ ಪರೀಕ್ಷೆಯ ಆಧಾರದ ಮೇಲೆ ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. 151 ಅಭ್ಯರ್ಥಿಗಳ ಉಮೇದುವಾರಿಕೆಯು ತಾತ್ಕಾಲಿಕವಾಗಿದೆ. ಅಭ್ಯರ್ಥಿಗಳು upsc.gov.in ನಲ್ಲಿ ಮೆರಿಟ್ ಪಟ್ಟಿಯನ್ನು ಪರಿಶೀಲಿಸಬಹುದು.

ಮೊದಲ ಸ್ಥಾನ ಪಡೆದಿರುವ  ಶುಭಂ ಕುಮಾರ್ ಐಐಟಿ ಬಾಂಬೆಯಿಂದ ಬಿ ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಒಟ್ಟಾರೆ ಎರಡನೇ ಶ್ರೇಯಾಂಕ ಪಡೆದ ಜಾಗೃತಿ ಅವಸ್ಥಿ ಮಹಿಳಾ ಅಭ್ಯರ್ಥಿಗಳಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಜಾಗೃತಿ ಅವರು ಮನಿತ್ ಭೋಪಾಲ್‌ನಿಂದ ಬಿ ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.

ಅಗ್ರ 25 ಅಭ್ಯರ್ಥಿಗಳ ಪೈಕಿ 13 ಪುರುಷರು ಹಾಗೂ 12 ಮಹಿಳೆಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News