ಬನ್ನಂಜೆ ಕಣ್ಣಿನ ಆಸ್ಪತ್ರೆಗೆ ನುಗ್ಗಿ ನಗದು ಕಳವು
Update: 2021-09-24 21:02 IST
ಉಡುಪಿ, ಸೆ.24: ಬನ್ನಂಜೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಗೆ ಸೆ.23ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಹಣ ಕಳವು ಮಾಡಿ ರುವ ಬಗ್ಗೆ ವರದಿಯಾಗಿದೆ.
ಆಸ್ಪತ್ರೆಯ ಶಟರಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ತಪಾಸಣಾ ಕೊಠಡಿಯ ಡ್ರಾವರ್‌ನಲ್ಲಿದ್ದ 20,000ರೂ. ಮತ್ತು ಇನ್ನೊಂದು ಡ್ರಾವರ್‌ನಲ್ಲಿದ್ದ 4,50,000ರೂ. ಹಾಗೂ ರಿಸೆಪ್ಷನ್ನಲ್ಲಿದ್ದ 4,500ರೂ. ಹಣವನ್ನು ಮತ್ತು ಸಿಸಿಟಿವಿ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 4,79,500ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯೆ ಡಾ.ಶಕಿಲಾ ಸಚಿನ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.