ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ: ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಡೆರೆಕ್ ಚಾವಿನ್

Update: 2021-09-24 17:14 GMT

ವಾಷಿಂಗ್ಟನ್, ಸೆ.24: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚಾವಿನ್ ಈ ತೀರ್ಪನ್ನು ಪ್ರಶ್ನಿಸಿ ಮಿನಿಸೋಟ ರಾಜ್ಯ ಅಪೀಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


ಅಪೀಲು ಪ್ರಕ್ರಿಯೆಗೆ ವಕೀಲರನ್ನು ನೇಮಿಸಿಕೊಳ್ಳಲು ತನ್ನಿಂದ ಸಾಧ್ಯವಾಗದು ಎಂದು ಈ ಹಿಂದೆ ಮಿನೆಸೋಟ ಸುಪ್ರೀಂಕೋರ್ಟ್ಗೆ ಮಾಡಿರುವ ಮನವಿಯ ವಿಚಾರಣೆ ಮುಗಿಯುವವರೆಗೆ ತನ್ನ ಶಿಕ್ಷೆಯನ್ನು ಅಮಾನತಿನಲ್ಲಿರಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

2020ರ ಮೇ ತಿಂಗಳಿನಲ್ಲಿ ನಿರಸ್ತ್ರಧಾರಿಯಾಗಿದ್ದ ಕಪ್ಪುವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ನ ಕೈಗಳನ್ನು ಕಟ್ಟಿಹಾಕಿ ಆತನ ಕುತ್ತಿಗೆ ಮೇಲೆ ಡೆರೆಕ್ ಚಾವಿನ್ ಮೊಣಕಾಲಿಟ್ಟು ನಿಂತಿದ್ದ ವೀಡಿಯೊ ವೈರಲ್ ಆಗಿತ್ತು. ಈ ಘಟನೆಯಲ್ಲಿ ಫ್ಲಾಯ್ಡ್ ಮೃತರಾಗಿದ್ದರಿಂದ ದೇಶದೆಲ್ಲೆಡೆ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಚಾವಿನ್ಗೆ 22 ವರ್ಷ 6 ತಿಂಗಳ ಜೈಲುಶಿಕ್ಷೆ ವಿಧಿಸಿತ್ತು.

ವಿಚಾರಣೆಯ ಸ್ಥಳ ಬದಲಾಯಿಸುವಂತೆ ತಾನು ಮಾಡಿದ್ದ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿರುವುದು , ಥರ್ಡ್ಡಿಗ್ರಿ ಹತ್ಯೆ ಆರೋಪ, ಸೇರಿದಂತೆ 14 ವಿಷಯಗಳನ್ನು ಗುರುವಾರ ಸಲ್ಲಿಸಿದ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News