ಹೋಮ್‌ಗಾರ್ಡ್‌ಗೆ ನಿಂದನೆ: ದೂರು

Update: 2021-09-24 17:24 GMT

ಮಂಗಳೂರು, ಸೆ.24: ತೊಕ್ಕೊಟ್ಟು ಕಾಪಿಕಾಡ್ ಪಾಯಿಂಟ್ ಸಮೀಪ ಗೃಹ ರಕ್ಷಕದಳ ಸಿಬ್ಬಂದಿ ಜಯಶ್ರೀ ಎಂಬವರಿಗೆ ಯುವಕರು ನಿಂದನೆ ಮಾಡಿದ ಘಟನೆ ವರದಿಯಾಗಿದೆ.

ಗೃಹರಕ್ಷಕ ದಳದ ಸಿಬ್ಬಂದಿ ಜಯಶ್ರೀ ಗುರುವಾರ ತೊಕ್ಕೊಟ್ಟು ಕಾಪಿಕಾಡ್ ಪಾಯಿಂಟ್‌ನಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಕರ್ತವ್ಯ ನಿರತರಾಗಿದ್ದಾರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಸವಾರಿ ಮಾಡುವವರ ಪೋಟೋವನ್ನು ತೆಗೆಯುತ್ತಿದ್ದರು. ಈ ಸಂದರ್ಭ ರಾ.ಹೆ-66ರ ಏಕಮುಖ ರಸ್ತೆಗೆ ವಿರುದ್ಧವಾಗಿ (ಉಳ್ಳಾಲ ಕಡೆಯಿಂದ ಕಾಫಿಕಾಡ್‌ಗೆ) ಸ್ಕೂಟರ್‌ವೊಂದರಲ್ಲಿ ಅದರ ಸವಾರ, ಸಹಸವಾರನನ್ನು ಕುಳ್ಳಿರಿಸಿಕೊಂಡು ಹೆಲ್ಮೇಟ್ ಹಾಕದೆ ಬರುತ್ತಿದ್ದರು. ಇವರಲ್ಲಿ ಹಿಂಬದಿ ಸವಾರ ಹಿಂಬದಿ ಮುಖಮಾಡಿ ಕುಳಿತ್ತಿದ್ದ. ಜಯಶ್ರೀ ಅವರು ಈ ಸ್ಕೂಟರ್‌ನ ಫೋಟೋ ತೆಗೆದಿದ್ದು, ನಂಬರ್ ಪ್ಲೇಟ್ ಮುಚ್ಚುವ ಉದ್ದೇಶದಿಂದ ಕಾಲು ಅಡ್ಡ ಹಾಕಿದ್ದ. ಬಳಿಕ ಜಯಶ್ರೀ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News