×
Ad

ಕಡಿಯಾಳಿ ದೇವಳದಲ್ಲಿ ಸಚಿವೆ ಶೋಭಾ ಸಹಿತ ಭಕ್ತರಿಂದ ಕರಸೇವೆ

Update: 2021-09-24 23:33 IST

ಉಡುಪಿ, ಸೆ.24: ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರರ ಅಂಗವಾಗಿ ದೇವಳ ಆವರಣದಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ನೂರಾರು ಮಂದಿ ಭಕ್ತರು ಶುಕ್ರವಾರ ಕರಸೇವೆ ನಡೆಸಿದರು.ಸಚಿವ ಶೋಭಾ ಕರಂದ್ಲಾಜೆ ದೇವಸ್ಥಾನದ ಸುತ್ತು ಪೌಳಿಯ ಮಣ್ಣಿನ ಕೆಲಸ ಮತ್ತು ದೇವಸ್ಥಾನದ ಸಂಪೂರ್ಣ ಸ್ವಚ್ಛತೆಯ ಕೆಲಸದಲ್ಲಿ ಭಕ್ತರೊಂದಿಗೆ ಸೇರಿಕೊಂಡರು. ದೇವಳದ ಮರದ ಕೆತ್ತನೆ ಕಾರ್ಯ ಸಹಿತ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರಾದ ಗಿರೀಶ್ ಎಂ.ಅಂಚನ್, ರಜನಿ ಹೆಬ್ಬಾರ್, ಶಿಲ್ಪಾ ರಘುಪತಿ ಭಟ್, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ನಗರ ಸಭೆ ಮಾಜಿ ಸದಸ್ಯೆ ಭಾರತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News