ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ದೋಣಿ ಮಗುಚಿ ವರದಿಗಾರ ಮೃತ್ಯು

Update: 2021-09-25 06:37 GMT
photo: twitter

ಭುವನೇಶ್ವರ: ಕಟಕ್ ಬಳಿಯ ಮುಂಡಲಿ ಬ್ಯಾರೇಜ್‌ನಲ್ಲಿ ಮಹಾನದಿ ನದಿಯಲ್ಲಿ ಶುಕ್ರವಾರ ಆನೆಯ ರಕ್ಷಣೆಯಲ್ಲಿ ತೊಡಗಿದ್ದ ಒಡಿಆರ್ ಎಫ್ ಪವರ್ ಬೋಟ್ ಮಗುಚಿ ಬಿದ್ದು ಒಡಿಶಾದ ಜನಪ್ರಿಯ ದೂರದರ್ಶನ ಪತ್ರಕರ್ತ ಅರಿಂದಮ್ ದಾಸ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಸ್ ಅವರು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಹಾಗೂ  ಕ್ಯಾಮರಾ ಪತ್ರಕರ್ತರೊಂದಿಗೆ ಪವರ್ ಬೋಟ್ ಹತ್ತಿದ್ದರು. ಬೋಟ್  ನದಿಯಲ್ಲಿ ಪ್ರಬಲ ಪ್ರವಾಹದಿಂದಾಗಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಸ್ ಹಾಗೂ  ಇತರ ಪತ್ರಕರ್ತರು ಮೂವರು ಒಡಿಆರ್ ಎಫ್ ಸಿಬ್ಬಂದಿಯೊಂದಿಗೆ ನೀರಿನಿಂದ ಗಂಭೀರ ಸ್ಥಿತಿಯಲ್ಲಿ ಹೊರಗೆ ತೆಗೆಯಲಾಗಿದ್ದು, ಕಟಕ್‌ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿತ್ತು.

"ಅರಿಂದಮ್ ಮೃತಪಟ್ಟಿರುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ನಾವು ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಜೀವಂತಗೊಳಿಸಲು ಪ್ರಯತ್ನಿಸಿದ್ದೇವೆ" ಎಂದು ಎಸ್‌ಸಿಬಿ ಅಧೀಕ್ಷಕ ಭುವಾನಂದ ಮೊಹರಾನಾ ಸುದ್ದಿಗಾರರಿಗೆ ತಿಳಿಸಿದರು.

ದಾಸ್ ಅವರ ಸಹೋದ್ಯೋಗಿ, ಕ್ಯಾಮರಾ ಪತ್ರಕರ್ತ ಪ್ರವತ್ ಸಿಂಘಾ ಕೂಡ ಆಸ್ಪತ್ರೆಯ ಔಷಧ ವಿಭಾಗದ ಐಸಿಯುಗೆ ದಾಖಲಾಗಿದ್ದಾರೆ.  ಒಡಿಆರ್ ಎಫ್ ಸಿಬ್ಬಂದಿಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೊಹರಾನಾ ಹೇಳಿದರು.

39ರ ವಯಸ್ಸಿನ ದಾಸ್ ವರದಿಗಾರನಾಗಿ ಜನಪ್ರಿಯರಾಗಿದ್ದರು. ಅವರು ಮಗ, ಪತ್ನಿ ಹಾಗೂ ತಾಯಿಯನ್ನು ಅಗಲಿದ್ದಾರೆ.

ಅವರು ಓಡಿಯಾದ ಪ್ರಮುಖ ಟಿವಿ ಸುದ್ದಿ ಚಾನೆಲ್ ಒಟಿವಿಯ ಮುಖ್ಯ ವರದಿಗಾರ ರಾಗಿದ್ದರು ಮತ್ತು ಚಂಡಮಾರುತಗಳಾದ ಫಲಿನ್, ಫಾನಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ಅಪರಾಧ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಕುರಿತಾದ ಪ್ರಮುಖ ಸುದ್ದಿಗಳನ್ನು ವರದಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News