ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ

Update: 2021-09-25 18:23 GMT

ವಾಷಿಂಗ್ಟನ್: ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ. ಭಾರತ ರೂಪಾಂತರಗೊಂಡಾಗ ಜಗತ್ತು ಬದಲಾಗುತ್ತದೆ. ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಪ್ರಪಂಚದಾದ್ಯಂತದ ಎಲ್ಲಾ ಲಸಿಕೆ ತಯಾರಕರಿಗೆ ನಾನು ಆಹ್ವಾನವನ್ನು ನೀಡುತ್ತೇನೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನು ಉದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅಫ್ಘಾನಿಸ್ತಾನ ಪ್ರದೇಶವನ್ನು ಭಯೋತ್ಪಾದನೆ ಹರಡಲು ಅಥವಾ ಭಯೋತ್ಪಾದನೆ ದಾಳಿಗಳಿಗೆ ಬಳಸುವುದಿಲ್ಲ  ಎಂದು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ನಾವು ಜಾಗರೂಕರಾಗಿರಬೇಕು ಹಾಗೂ  ಯಾವುದೇ ದೇಶವು ಅಲ್ಲಿನ ಸೂಕ್ಷ್ಮ ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುವುದಿಲ್ಲ ಹಾಗೂ  ಅದನ್ನು ತಮ್ಮ ಸ್ವಾರ್ಥಿ ಹಿತಾಸಕ್ತಿಗಳಿಗೆ ಸಾಧನವಾಗಿ ಬಳಸಿಕೊಳ್ಳುವುದಿಲ್ಲ  ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಸಮುದ್ರ ಸಂಪನ್ಮೂಲ ಬಳಸಿಕೊಳ್ಳಬೇಕು. ದುರ್ಬಳಕೆ ಮಾಡಬಾರದು. ವಿಶ್ವ ಸಂಸ್ಥೆ ಸುಧಾರಣೆ ಆಗಲೇಬೇಕು. ಅಫ್ಘಾನ್ ಬಗ್ಗೆ ವಿಶ್ವಸಂಸ್ಥೆಯ ನಿಲುವು ಹಲವು ಪ್ರಶ್ನೆ ಹುಟ್ಟುಹಾಕಿದೆ. ಭಯೋತ್ಪಾದನೆಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ನರೇಂದ್ರ ಮೋದಿ  ಹೇಳಿದ್ದಾರೆ.

ಭಾರತದ ಉಜ್ವಲ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆಯಾಗಿದೆ. ಭಾರತ ಸ್ವಾತಂತ್ರ್ಯದ 75ನೇ ವರ್ಷ ಪ್ರವೇಶಿಸಿದೆ.  ಅಭಿವೃದ್ದಿಯಿಂದ ಯಾರನ್ನೂ ಹೊರಗಿಡುವುದಿಲ್ಲ.  ಕೋವಿನ್ ಪೋರ್ಟಲ್ ಮೂಲಕ ಕೋಟಿಗಟ್ಟಲೆ ಲಸಿಕೆ ನೀಡಲಾಗಿದೆ. ವಿಶ್ವದ ಮೊದಲ ಡಿಎನ್ ಎ ಲಸಿಕೆ ಸಂಶೋಧನೆ ಮಾಡಲಾಗುತ್ತಿದೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದು  ಮೋದಿ  ಹೇಳಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು

* ಭಾರತವು ಪ್ರಖರ ಪ್ರಜಾಪ್ರಭುತ್ವದ ಹೊಳೆಯುವ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ ಮತ್ತು ಅದು ಯಶಸ್ವಿಯೂ ಆಗಿದೆ.

* ಭಾರತವು ಬೆಳೆದಾಗ ವಿಶ್ವವೂ ಬೆಳವಣಿಗೆಯಾಗುತ್ತದೆ. ಭಾರತವು ಪರಿವರ್ತನೆಗೊಂಡಾಗ ವಿಶ್ವವೂ ಪರಿವರ್ತನೆಗೊಳ್ಳುತ್ತದೆ.

* ಭಾರತದಲ್ಲಿ ಲಸಿಕೆಗಳನ್ನು ಉತ್ಪಾದಿಸುವಂತೆ ವಿಶ್ವದ ಎಲ್ಲ ಲಸಿಕೆ ತಯಾರಕರನ್ನು ನಾನು ಆಹ್ವಾನಿಸುತ್ತಿದ್ದೇನೆ.

* ನಮ್ಮ ಮಹಾಸಾಗರಗಳು ಅಂತರರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿವೆ. ವಿಸ್ತರಣೆಯ ಸ್ಪರ್ಧೆಯಿಂದ ನಾವು ಅವುಗಳನ್ನು ರಕ್ಷಿಸಬೇಕಿದೆ. ನಿಯಮಾಧಾರಿತ ಜಾಗತಿಕ ಶಿಸ್ತನ್ನು ಬಲಪಡಿಸಲು ಅಂತರರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಿಂದ ಮಾತನಾಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News