ಮಧ್ಯಪ್ರದೇಶ: ಮಹಿಳಾ ಕಾನ್‌ಸ್ಟೆಬಲ್ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಆರೋಪಿಗಳ ಬಂಧನ

Update: 2021-09-25 17:34 GMT

ನಿಮಚ್, ಸೆ. 25: ಮೂವತ್ತರ ಹರೆಯದ ಮಹಿಳಾ ಕಾನ್ಸ್‌ಟೆಬಲ್ ಓರ್ವರ ಮೇಲೆ ಅತ್ಯಾಚಾರ ನಡೆಸಿದ, ವೀಡಿಯೋ ಮಾಡಿದ ಹಾಗೂ ಬೆದರಿಕೆ ಒಡ್ಡಿದ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಘಟನೆ ಈ ತಿಂಗಳ ಆರಂಭದಲ್ಲಿ ನಡೆದಿದೆ. ಮಹಿಳಾ ಕಾನ್ಸ್‌ಟೆಬಲ್ ಸೆಪ್ಟಂಬರ್ 13ರಂದು ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಮುಖ್ಯ ಆರೋಪಿಯ ತಾಯಿ ಸೇರಿದಂತೆ ಮೂವರ ವಿರುದ್ಧ ಈ ವಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿ ಹಾಗೂ ಆತನ ತಾಯಿಯನ್ನು ಬಂಧಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಅನುರಾಧಾ ಗಿರ್ವಾಲ್ ಅವರ ತಿಳಿಸಿದ್ದಾರೆ. ಆರೋಪಿ ಫೇಸ್‌ಬುಕ್ ಮೂಲಕ ಸಂತ್ರಸ್ತೆಯ ಗೆಳೆತನ ಬೆಳೆಸಿಕೊಂಡಿದ್ದ. ಅಲ್ಲದೆ, ಎಪ್ರಿಲ್‌ನಿಂದ ವ್ಯಾಟ್ಸ್‌ಆ್ಯಪ್ ಮೂಲಕ ಸಂವಹನ ನಡೆಸುತ್ತಿದ್ದ. ತನ್ನ ಕಿರಿಯ ಸಹೋದರನ ಜನ್ಮ ದಿನ ಆಕೆಯನ್ನು ಆಹ್ವಾನಿಸಿದ್ದ. ಅಂದು ಮೂವರೊಂದಿಗೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಗಿರ್ವಾಲ್ ಹೇಳಿದ್ದಾರೆ. ಜನ್ಮ ದಿನಾಚರಣೆ ಸಂದರ್ಭ ತನ್ನ ಮೇಲೆ ಮುಖ್ಯ ಆರೋಪಿ ಆತನ ಸಹೋದರ ಹಾಗೂ ಇನ್ನೋರ್ವ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಕೃತ್ಯವನ್ನು ವೀಡಿಯೊ ದಾಖಲು ಮಾಡಿಕೊಂಡಿದ್ದಾರೆ ಎಂದು ದೂರುದಾರರೆ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News