ನಿಧಾನಗತಿಯ ಬೌಲಿಂಗ್:ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗೆ 24 ಲಕ್ಷ ರೂ. ದಂಡ

Update: 2021-09-26 07:28 GMT

ಶಾರ್ಜಾ: ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ 2021 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ  ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ನಾಯಕ ಸಂಜು ಸ್ಯಾಮ್ಸನ್ ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.  ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ 33 ರನ್ ಗಳಿಂದ ಡೆಲ್ಲಿ ವಿರುದ್ಧ ಸೋತಿತು.

ಐಪಿಎಲ್‌ನ ನೀತಿ ಸಂಹಿತೆಯ ಪ್ರಕಾರ ನಿಧಾನಗತಿಯ ಬೌಲಿಂಗ್ ಗೆ ಸಂಬಂಧಿಸಿ ಇದು ತಂಡದ ಎರಡನೇ ಅಪರಾಧವಾಗಿದ್ದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 24 ಲಕ್ಷ ರೂ. ಆಡುವ 11ರ ಬಳಗದ ಉಳಿದ ಪ್ರತಿಯೊಬ್ಬರೂ 6 ಲಕ್ಷ ರೂಪಾಯಿ ಅಥವಾ ಅವರ ವೈಯಕ್ತಿಕ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಐಪಿಎಲ್ 2021 ರ ಯುಎಇ ಚರಣದಲ್ಲಿ ನಿಧಾನಗತಿಯ ಬೌಲಿಂಗ್ ಗಾಗಿ ಸ್ಯಾಮ್ಸನ್‌ಗೆ ಇದೀಗ ಸತತ ಎರಡನೇ ಬಾರಿ ದಂಡ ವಿಧಿಸಲಾಗಿದೆ. ಮಂಗಳವಾರ  ದುಬೈನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ಎರಡು ರನ್ ಗಳ ರೋಚಕ ಗೆಲುವಿನ ನಂತರ ಸ್ಲೋ ಓವರ್ ರೇಟ್ ಗಾಗಿ ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News