ವೆಲ್ಫೇರ್ ಅಸೋಸಿಯೇಶನ್ ರಾಣಿಪುರ ಉದ್ಘಾಟನೆ

Update: 2021-09-26 11:40 GMT

ಮಂಗಳೂರು, ಸೆ.26: ವೆಲ್ಫೇರ್ ಅಸೋಸಿಯೇಶನ್ ರಾಣಿಪುರ ಇದರ ಉದ್ಘಾಟನಾ ಕಾರ್ಯಕ್ರವು ರವಿವಾರ ಮುನ್ನೂರು ಗ್ರಾಪಂ ಸಮುದಾಯ ಭವನದಲ್ಲಿ ನಡೆಯಿತು.

ರಾಣಿಪುರ ಮೇರಿ ಚರ್ಚ್‌ನ ಧರ್ಮಗುರು ಜಯಪ್ರಕಾಶ್ ಡಿಸೋಜ ಶುಭ ಹಾರೈಸಿದರು. ರಾಣಿಪುರ ಋಷಿವನ ಸಂಸ್ಥೆಯ ನಿರ್ದೇಶಕ ವಿಲ್ಫ್ರೆಡ್ ರಾಡ್ರಿಗಸ್ ಸಂಘಟನೆಯ ಲೋಗೊ ಬಿಡುಗಡೆಗೊಳಿಸಿದರು. ರಾಣಿಪುರ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಮೀನಾ ಸಂಘಟನೆಯ ಸಾಮಾಜಿಕ ಜಾಲತಾಣಗಳನ್ನು ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಸಂಘಟನೆಯ ಉಪಾಧ್ಯಕ್ಷ ಎರಾಲ್ಡ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕುವೆಲ್ಲೊ, ಪ್ರವೀಣ್ ಡಿಸೋಜ, ಟೈಟಸ್ ಡಿಸೋಜ ಉಪಸ್ಥಿತರಿದ್ದರು.

ಈ ಸಂದರ್ಭ ಕಿಡ್ನಿ ಶಸ್ತ್ರಚಿಕಿತ್ಸೆ ಗೆ ಒಳಪಟ್ಟಿರುವ ಸ್ವೀಟಿ ಮೆಲ್ವಿಟಾ ಡಿಸೋಜರಿಗೆ 50,000 ರೂ. ಸಹಾಯಧನವನ್ನು ಸಂಘಟನೆ ವತಿಯಿಂದ ಘೋಷಿಸಲಾಯಿತು. ಸಂಘಟನೆ ಸೇವಾ ಕಾರ್ಯಗಳಿಗೆ ಮೇರಿ ಡಿಸೋಜ 1 ಲಕ್ಷ ರೂ. ಹಸ್ತಾಂತರಿಸಿದರು.

ಸಂಸ್ಥೆಯ ಅಧ್ಯಕ್ಷ ಜೋಸೆಫ್ ಪಾವ್ಲ್ ಸ್ವಾಗತಿಸಿದರು. ಜೀವನ್ ಫೆರಾವೋ ವಂದಿಸಿದರು. ಫೆಲಿಕ್ಸ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News