ಕರಕುಶಕರ್ಮಿಗಳಿಗೆ ಸಬ್ಸಿಡಿ ಯೋಜನೆ ಕುರಿತು ಚಿಂತನೆ: ಸಚಿವ ಕೋಟ

Update: 2021-09-26 11:55 GMT

ಉಡುಪಿ, ಸೆ.26: ಹಿಂದಿನಿಂದಲೂ ಪ್ರತಿಯೊಬ್ಬರಿಗೂ ಕುಲಕಸುಬುಗಳಿವೆ. ಇದನ್ನು ಮುಂದಿನ ಜನಾಂಗಕ್ಕೆ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಇಂತಹ ಕರಕುಶಲ ವಸ್ತುಗಳಿಗೆ ಆಧುನಿಕ ಸ್ಪರ್ಶ ನೀಡಿ ವೃತ್ತಿಪರರ ಬದುಕಿಗೆ ಬೇಕಾದ ಸಹಕಾರ ನೀಡಬೇಕು. ಸರಕಾರದ ವತಿಯಿಂದ ಅದಕ್ಕೆ ಬೇಕಾದ ಮಾರುಕಟ್ಟೆಯನ್ನು ಕಲ್ಪಿಸಿ ಸಬ್ಸಿಡಿ ಯೋಜನೆ ಕುರಿತು ಚಿಂತನೆ ಮಾಡಲಾಗು ವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಗೊಡ್ಡ ಮೊಗೇರ ಸಮಾಜದ ಕುಲಕಸುಬಿನ ಪುನರುತ್ಥಾನ ಅಂಗವಾಗಿ ರವಿವಾರ ರಾಜಾಂಗಣದಲ್ಲಿ ನಡೆದ ಚಾಪೆ ಹೆಣೆಯುವ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ನಬಾರ್ಡಿನ ಮಂಗಳೂರಿನ ಜಂಟಿ ನಿರ್ದೇಶಕ ಅರುಣ್ ತಲ್ಲೂರು ಮಾತನಾಡಿದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಸಮಾಜ ಬದಲಾಗುತ್ತಿದೆ. ಈಗಿನ ಪೀಳಿಗೆಯವರು ಪ್ರಾಚೀನ ವಸ್ತುಗಳನ್ನೇ ಉಪಯೋಗ ಮಾಡಲು ಆರಂಭಿಸಿದ್ದಾರೆ. ಈ ಕುಲಕಸುಬಿನವರು ಒಗ್ಗಟ್ಟಾಗಿ ಪ್ರಯತ್ನ ಮಾಡಿದರೆ ಸರಕಾರ ಹಾಗೂ ಸಮಾಜದಿಂದ ಉತ್ತಮ ರೀತಿಯ ಸಹಕಾರ ಸಿಗುತ್ತದೆ. ನಮ್ಮ ಊರಿನ ಕಲೆ ಉಳಿಸುವ ಜವಾಬ್ಧಾರಿ ನಮಗಿದೆ. ಇದನ್ನು ಉಳಿಸಿದರೆ ನಮ್ಮ ದೇಶದ ಮೌಲ್ಯ ವರ್ಧೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಮುಖ ಸಲಹೆಗಾರರಾದ ಪುರುಷೋತ್ತಮ ಅಡ್ವೆ, ಜಗನ್ನಾಥ ಬಂಗೇರ, ನಾಗರಾಜ ಗುರಿಕಾರ ಉಪಸ್ಥಿತರಿದ್ದರು. ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಸ್ವಾಗತಿಸಿ, ರಾಜಶೇಖರ ಜಿ.ಎಸ್. ಮಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಬಳಗದ ವೈ.ಎನ್.ರಾಮಚಂದ್ರ ರಾವ್ ವಂದಿಸಿದರು.

ಕಾರ್ಯಾಗಾರ ಉದ್ಘಾಟನೆ

ಚಾಪೆ ಹೆಣೆಯುವ ಕಾರ್ಯಾಗಾರವನ್ನು ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀವರ್ಚನ ನೀಡಿದರು. ಈ ಸಂದರ್ಭದಲ್ಲಿ ಜಗನ್ನಾಥ ಬಂಗೇರಮಟ್ಟು, ರಾಜಶೇಖರ ಜಿ.ಎಸ್. ಮಟ್ಟು, ಶ್ರೀಕೃಷ್ಣ ಬಳಗದ ವೈ.ಎನ್.ರಾಮಚಂದ್ರ ರಾವ್, ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ರೋಹಿತ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News