ಹೊಳೆಗೆ ಬಿದ್ದು ಬಾಲಕ ಮೃತ್ಯು
Update: 2021-09-26 20:53 IST
ಬೈಂದೂರು, ಸೆ.26: ಹೊಳೆ ಬದಿ ಆಡುತ್ತಿದ್ದ ಬಾಲಕನೋರ್ವ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೆ.26ರಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ.
ಮೃತರನ್ನು ಶಿರೂರು ಗ್ರಾಮದ ಅಳ್ವೆಗದ್ದೆ ಕೇಸರಕೋಡಿಯ ವೆಂಕಟೇಶ ಮೇಸ್ತ ಎಂಬವರ ಮಗ ಪನ್ನಗ(12) ಎಂದು ಗುರುತಿಸಲಾಗಿದೆ. ಈತ ನೆರೆಮನೆಯ ರಾಜೇಶನೊಂದಿಗೆ ಶಿರೂರು ಗ್ರಾಮದ ಕಿರುಹೊಳೆ ಕುಸಿನಗದ್ದೆ ಹೊಳೆಯ ದಡದಲ್ಲಿ ಆಟವಾಡುತಿದ್ದನು. ಈ ವೇಳೆ ಕಾಲು ಜಾರಿ ಹೊಳೆಗೆ ಬಿದ್ದ ಪನ್ನಗ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.