ದ.ಕ ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗಿಗಳಾಗಬೇಕಾದರೆ ಹೋರಾಟವೇ ಅಸ್ತ್ರ : ಮುನೀರ್ ಕಾಟಿಪಳ್ಳ

Update: 2021-09-27 09:43 GMT

ಮಂಗಳೂರು: 'ಡಿವೈಎಫ್‌ಐ ನಡಿಗೆ ಯುವ ಜನರ ಕಡೆಗೆ, ಯುವಜನರ ನಡಿಗೆ ಉದ್ಯೋಗದ ಕಡೆಗೆ ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು, ಉದ್ಯೋಗ ಸೃಷ್ಠಿಸಿ,ಸ್ಥಳೀಯರಿಗೆ ಆದ್ಯತೆ ನೀಡಿ' ಎಂಬ ಘೋಷಣೆ ಅಡಿಯಲ್ಲಿ ಕೊಲ್ಲರಕೋಡಿ ಘಟಕದ ಸಮಾವೇಶ ರವಿವಾರ ನಡೆಯಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ವಿದ್ಯಾವಂತ ಯುವಕರಿಗೆ ಸರಕಾರ ಉದ್ಯೋಗ ಸೃಷ್ಠಿ ಮಾಡದೆ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಉದ್ಯೋಗ ವಿಲ್ಲದೆ ಹತಶಾರಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ, ಮಾತ್ರವಲ್ಲದೆ ದಾರಿ ತಪ್ಪುತ್ತಿದ್ದಾರೆ. ಯುವಕರು ದಾರಿ ತಪ್ಪಬಾರದು ಅದಕ್ಕಾಗಿ ಪ್ರತಿಯೊಬ್ಬರ ಉದ್ಯೋಗಕ್ಕಾಗಿ ಹೋರಾಟ ಸಂಘಟಿಸಬೇಕೆಂದು ಕರೆ ನೀಡಿದರು.

ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2ಕೋಟಿ ಉದ್ಯೋಗದ ಆಸೆ ತೋರಿಸಿದೆ, ಆದರೆ ಉದ್ಯೋಗದ ಸೃಷ್ಟಿಯ ಬದಲು ಲಕ್ಷಾಂತರ ಯುವಜನರು  ಉದ್ಯೋಗ ಕಳೆದು ಕೊಂಡಿದ್ದಾರೆ. ಉದ್ಯೋಗ ಹಕ್ಕಿಗೆ ಡಿವೈಎಫ್‌ಐ ಸಮರದೀರ ಹೋರಾಟ ನಡೆಸುತ್ತದೆ ಎಂದು ಹೇಳಿದರು.

ದ.ಕ ಜಿಲ್ಲಾ ಉಪಾಧ್ಯಕ್ಷರಾದ ಡಾ. ಜೀವನ್ ರಾಜ್ ಕುತ್ತಾರ್,  ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ , ಉಳ್ಳಾಲ ವಲಯ ಮುಖಂಡರಾದ ರಝಾಕ್ ಮೊಂಟೆಪದವು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷರಾದ ರಪೀಕ್ ಹರೇಕಳ, ಉಳ್ಳಾಲ ವಲಯ ಮುಖಂಡರಾದ ಅಶ್ರಪ್ ಹರೇಕಳ, ರಫೀಕ್ ಮೊಂಟೆಪದವು ಉಪಸ್ಥಿತರಿದ್ದರು.

ಈ ಸಂದರ್ಭ ಕೊಲ್ಲರಕೋಡಿ ಘಟಕವು 21 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ನೌಸೀಫ್ ಕೊಲ್ಲರಕೋಡಿ, ಕಾರ್ಯದರ್ಶಿಯಾಗಿ ಶಬೀರ್ ಕೊಲ್ಲರಕೋಡಿ, ಗೌರವ ಸಲಹೆಗಾರರಾಗಿ ಶರೀಫ್ ಕೊಲ್ಲರಕೋಡಿ, ಉಪಾಧ್ಯಕ್ಷರಾಗಿ ಆಸಿಫ್ ಹಾಗೂ ರೌಫ್, ಜೊತೆಕಾರ್ಯದರ್ಶಿ ಯೂಸುಫ್ ಹೈದರ್ ಹಾಗೂ ಜಾಬಿರ್, ಕೋಶಾಧಿಕಾರಿಯಾಗಿ ನಿಝಾಂ, ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ನೌಫಲ್ ಹಾಗೂ ಹಾಝಿಂರವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News