ಸೆ.29ಕ್ಕೆ ಕೆಎಂಸಿ ಫೇಸ್ ಬುಕ್‌ನಲ್ಲಿ ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ
ಮಣಿಪಾಲ, ಸೆ.27: ವಿಶ್ವ ಹೃದಯ ದಿನದ ಅಂಗವಾಗಿ ಸೆ.29ರ ಬುಧವಾರ ಸಂಜೆ 5 ರಿಂದ 6 ಗಂಟೆಯವರೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಫೇಸ್ ಬುಕ್ ಚಾನೆಲ್‌ನಲ್ಲಿ ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಮುಕ್ತ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಲಾಕ್‌ಡೌನ್ ಮತ್ತು ಕೋವಿಡ್ -19 ಸಾಂಕ್ರಾಮಿಕವು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದಕ್ಕೆ ಕಾರಣ ಹೆಚ್ಚಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆರಾಮ ದಾಯಕ ಜೀವನ ಶೈಲಿ. ಈ ಸಾಂಕ್ರಾಮಿಕದ ಸಮಯದಲ್ಲಿ ಜಂಕ್ ಮತ್ತು ಬೀದಿ ಆಹಾರಗಳ ಬಳಕೆ ಕಡಿಮೆಯಾಗಿದ್ದರೂ, ಆರಾಮದಾಯಕ ಕೆಲಸ ಅಥವಾ ಹೆಚ್ಚಾಗಿ ಹೊರಗಡೆ ತಿರುಗಾಡದ ಜೀವನಶೈಲಿಯು ಜನರ ತೂಕವನ್ನು ಹೆಚ್ಚಿಸಲು ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಮನೆಯಿಂದ ಕೆಲಸ ಮತ್ತು ಆನ್‌ಲೈನ್ ತರಗತಿಗಳು ಕೂಡ ಜನರ ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯದ ಮೇಲೆ ಕಡಿಮೆ ಏಕಾಗ್ರತೆಯೊಂದಿಗೆ ಜೀವನಶೈಲಿಗೆ ಕಾರಣವಾಗಿದೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.
ಈ ಮುಕ್ತ ಮಾತುಕತೆಯಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ಅಶ್ವಲ್ ಎ ಜೆ, ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಪ್ರಸಾದ್ ರೈ, ಮಕ್ಕಳ ಹೃದ್ರೋಗ ತಜ್ಞರಾದ ಡಾ. ಗುಂಜನ್ ಬಂಗ ಮತ್ತು ಪಥ್ಯಾಹಾರ ವಿಭಾಗದ ಮುಖ್ಯಸ್ಥೆ ಸುವರ್ಣ ಹೆಬ್ಬಾರ್ ಭಾಗವಹಿಸಲಿದ್ದಾರೆ.
ಚರ್ಚೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಆಸಕ್ತರು ಈ ಕೆಳಗಿನ ಲಿಂಕ್ ಬಳಸಿ ಫೇಸ್ ಬುಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು https://www.facebook.com/ManipalKasturbaHospit ಕೆಎಂಸಿ ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.