ಭಾರತ್ ಬಂದ್: ಕುಂದಾಪುರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಕುಂದಾಪುರ ಸೆ.27: ಕೇಂದ್ರ, ರಾಜ್ಯ ಸರಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಕುಂದಾಪುರ ಸಂಯುಕ್ತ ಸಮಿತಿ ವತಿಯಿಂದ ಭಾರತ್ ಬಂದ್ ಬೆಂಬಲಿಸಿ ಇಂದು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಮಾತನಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋದಿಸಿ ಕಳೆದ 10 ತಿಂಗಳಿಂದ ದಿಲ್ಲಿಯ ಗಡಿ ಭಾಗದಲ್ಲಿ ನಿರಂತರವಾಗಿ ಧರಣಿಯನ್ನು ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ಜೊತೆ ಹಲವಾರು ಸುತ್ತಿನ ಮಾತುಕತೆಗಳಾದರು ಕೂಡ ರೈತ ವಿರೋಧಿ ಕಾಯ್ದೆಯನ್ನು ವಾಪಸು ಪಡೆಯಲು ಸರಕಾರ ಮುಂದಾಗಲಿಲ್ಲ. ಅದಕ್ಕಾಗಿ ಸರಕಾರದ ವಿರುದ್ದ ರೈತ ಚಳವಳಿ ಇಂದು ಇಡೀ ದೇಶ ವ್ಯಾಪಿಸುತ್ತಿದೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಆಟೋ ಚಾಲಕ ಸಂಘದ ಮುಖಂಡರಾದ ಚಂದ್ರಶೇಖರ ವಿ., ಅಂಗನವಾಡಿ ತಾಲೂಕು ಅಧ್ಯಕ್ಷೆ ಆಶಾಲತಾ ಶೆಟ್ಟಿ, ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಬೀಡಿ ಕಾರ್ಮಿಕ ಸಂಘದ ಮುಖಂಡ ರಾದ ಬಲ್ಕಿಸ್, ರಾಜು ದೇವಾಡಿಗ, ಪ್ರಕಾಶ್ ಕೋಣೆ, ಸಂತೋಷ್ ಹೆಮ್ಮಾಡಿ ಉಪಸ್ಥಿತರಿದ್ದರು.