×
Ad

ಪಡುಕೆರೆ ಸಮುದ್ರ ತೀರ ಸ್ವಚ್ಛಗೊಳಿಸುವ ಕಾರ್ಯಕ್ರಮ

Update: 2021-09-27 20:17 IST

ಮಲ್ಪೆ, ಸೆ.27: ರೋಟರಿ ಕ್ಲಬ್ ಮಣಿಪಾಲ ಮತ್ತು ರೋಟರಾಕ್ಟ ಕ್ಲಬ್ ಮಣಿಪಾಲ ಸೆಂಟ್ರಲ್ ಇವುಗಳ ಸಹಯೋಗದಲ್ಲಿ ರೋಟರಾಕ್ಟ ಕ್ಲಬ್ಗಳಾದ ಎಸ್‌ಡಿಎಂ ಕಾಲೇಜು, ಇಂದಿರಾ ಶಿವರಾಮ ಪಾಲಿಟೆಕ್ನಿಕ್ ಕಾಲೇಜು ಹಾಗೂ ಇತರ ಸಂಘ ಸಂಸ್ಥೆಗಳಿಂದ ಪಡುಕೆರೆ ಸಮುದ್ರ ತೀರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಸೆ.26ರಂದು ಹಮ್ಮಿಕೊಳ್ಳಲಾಗಿತ್ತು.

ರೋಟರಾಕ್ ಕ್ಲಬ್ ಮಣಿಪಾಲ ಸೆಂಟ್ರಲ್ನ ಅಧ್ಯಕ್ಷೆ ರೇಷ್ಮ ಮಾತನಾಡಿ ದರು. ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ.ವಿರೂಪಾಕ್ಷ ದೇವರಮನೆ, ಸುಬಾ ರಾವ್ ಉಪಸ್ಥಿತರಿದ್ದರು. ವಿವಿಧ ರೋಟರಾಕ್ಟ್ ಕ್ಲಬ್ಗಳ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ 50ಕ್ಕು ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಹಾಸ್ ಸಂಸ್ಥೆಯ ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News