×
Ad

ಅ.3ಕ್ಕೆ ಸಬ್-ಇನ್ಸ್‌ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆ

Update: 2021-09-27 20:20 IST

ಉಡುಪಿ, ಸೆ.27: ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ ಮತ್ತು ಮಹಿಳಾ (ಎನ್‌ಕೆಕೆ-ಕೆಕೆ) ಹಾಗೂ ಸೇವಾನಿರತರನ್ನೊಳಗೊಂಡ 545 ಹುದ್ದೆ ಗಳಿಗೆ ನಡೆಸಲಾದ ಇಟಿ/ಪಿಎಸ್‌ಟಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅ.3ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.

ಪತ್ರಿಕೆ-1 ಮತ್ತು 2ನ್ನು ಕ್ರಮವಾಗಿ ಬೆಳಗ್ಗೆ 11:00ರಿಂದ 12:30ರವರೆಗೆ ಮತ್ತು 3ರಿಂದ 4:30ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಕರೆಪತ್ರವನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ -www.recruitment.ksp.gov.in -ನಿಂದ ಡೌನ್‌ಲೋಡ್ ಮಾಡಿಕೊಳ್ಳ ಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News