×
Ad

ಡಾ.ಮಹಾಬಲೇಶ್ವರ ರಾವ್‌ಗೆ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ ಪ್ರದಾನ

Update: 2021-09-27 20:38 IST

ಉಡುಪಿ, ಸೆ.27: ಉಡುಪಿಯ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರಿಗೆ ಸೆ.26ರಂದು ಅವರ ಮನೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ 2019ನೆ ಸಾಲಿನ ಪುಸ್ತಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಕಾಡಮಿಯ ಮಾನವಿಕ ವಿಭಾಗದಲ್ಲಿ ಇವರ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ ಎಂಬ ಕೃತಿಗೆ ಬಹುಮಾನ ಬಂದಿದ್ದು ಕಾರಣಾಂತರಗಳಿಂದ ಲೇಖಕರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಆದುದರಿಂದ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ. ಬಿ.ವಿ.ವಸಂತ ಕುಮಾರ್, ಸದಸ್ಯರಾದ ಡಾ.ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್ ಎನ್.ಕರಿಯಪ್ಪ ಲೇಖಕರ ಮನೆಗೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ರಾಮಾಂಜಿ, ನರಸಿಂಹ ಮೂರ್ತಿ, ಹರೀಶ್ ಕುಮಾರ್, ಸುಕನ್ಯಾ ಕಳಸ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News