ನಂಚಾರು ಸೀತಾನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
Update: 2021-09-27 20:40 IST
ಕೋಟ, ಸೆ.27: ನಂಚಾರು ಸೇತುವೆ ಕೆಳಗೆ ಸೀತಾ ನದಿಯಲ್ಲಿ ಈಜುತ್ತಿದ್ದ ವೇಳೆ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ.26ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಮಧುವನದ ಇಆರ್‌ಎಸ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ 2ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿ ಜಿಬಿನ್ ಸಾಮ್(20) ಎಂದು ಗುರುತಿಸಲಾಗಿದೆ. ಇವರು ಸುದೀಶ್, ಆಲ್ವಿನ್ ಜೊಯ್ ಜೊತೆ ಸ್ನೇಹಿತ ಅಮಲ್ ಬಿಜು ಎಂಬವರ ಮನೆಗೆ ಹೋಗಿದ್ದು, ಅಲ್ಲಿ ಎಲ್ಲರೂ ಸೇರಿ ಕೊಂಡು ಸೀತಾನದಿ ಹೊಳೆಯಲ್ಲಿ ಈಜಲು ಹೋಗಿದ್ದರು.
ಈಜುತ್ತಿರುವಾಗ ಜಿಬಿನ್ ಸಾಮ್ ನೀರಿನ ಅಡಿಯಲ್ಲಿ ಸಿಲುಕಿ ನಾಪತ್ತೆ ಯಾದರು. ಇತರ ಸ್ನೇಹಿತರ ಸಹಾಯದಿಂದ ಸಾಮ್‌ನನ್ನು ಮೇಲಕ್ಕೆ ತ್ತಿದ್ದು, ತೀವ್ರ ವಾಗಿ ಅಸ್ವಸ್ಥಗೊಂಡ ಅವರು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.