ಹಾಲಿನ ಡೈರಿಗೆ ನುಗ್ಗಿ ಕಳವು
Update: 2021-09-27 20:46 IST
ಅಮಾಸೆಬೈಲು, ಸೆ.27: ಜಡ್ಡಿನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಡೈರಿಯ ಕಛೇರಿಗೆ ಸೆ.22ರ ಸಂಜೆಯಿಂದ ಸೆ.23ರ ಬೆಳಗಿನ ಮಧ್ಯಾವಧಿ ಯಲ್ಲಿ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಚೇರಿಯ ಹಿಂಬದಿ ಕಿಟಕಿಯ ಎರಡು ಸರಳುಗಳನ್ನು ಬಗ್ಗಿಸಿ ಒಳನುಗ್ಗಿದ ಕಳ್ಳರು, ಮೇಜಿನ ಡ್ರಾವರ್‌ನಲ್ಲಿ ಇರಿಸಿದ್ದ ಹಾಲು ಡೈರಿಯಲ್ಲಿ ಪಶು ಆಹಾರವನ್ನು ಮಾರಾಟ ಮಾಡಿ ಸಂಗ್ರಹಿಸಿದ 25,047ರೂ.ವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.