ಉಪ್ಪಿನಂಗಡಿ : ರೈತ ವಿರೋಧಿ ಕಾಯ್ದೆ ವಿರೋಧಿಸಿ ಎಸ್‍ಡಿಪಿಐ ಪ್ರತಿಭಟನೆ
ಉಪ್ಪಿನಂಗಡಿ : ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿರುವ ಭಾರತ ಬಂದ್‍ಗೆ ಬೆಂಬಲವಾಗಿ ರಾಷ್ಟ್ರೀಯ ಡೆಮಾಕ್ರಟಿಕ್ ಪಕ್ಷವು ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಪ್ರತಿಭಟನೆ ನಡೆಸಿತು.
ಎಸ್‍ಡಿಪಿಐ ಮುಖಂಡ ವಿಕ್ಟರ್ ಮಾರ್ಟಿಸ್ ಮಾತನಾಡಿ, ದೇಶದ ಜನರಿಗೆ ಅಚ್ಚೇದಿನ್ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಇದ್ದದ್ದನ್ನು ಮಾರಿ ಹಾಕಿದ್ದು ಬಿಟ್ಟರೆ ಅಚ್ಚೇದಿನ್ ತರಲೇ ಇಲ್ಲ. ಇದರೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಯಾವುದೇ ಸಾಧಕಗಳಿಲ್ಲ. ಎಲ್ಲವು ಬಾಧಕವಾಗಿರುವ ಅಂಶಗಳೇ ಆಗಿದೆ. ಆದರೆಲ್ಲಾ ಎಲ್ಲರೂ ಇದನ್ನು ಅರ್ಥೈಸಿಕೊಂಡು ಈ ಕಾಯ್ದೆಗಳನ್ನು ವಿರೋಧಿಸಬೇಕಿದೆ. ರಾಹುಲ್ ಗಾಂಧಿ ಹೇಳಿರುವಂತೆ ಚೌಕಿದಾರ್ ಚೋರ್ ಹೇ ಎಂಬ ಮಾತು ಈಗ ನಿಜವಾಗುತ್ತಿದೆ. ಚೌಕಿದಾರ್ ಕೇವಲ ಕಳ್ಳ ಅಲ್ಲ. ಷೋಕಿಲಾಲ್ ಕೂಡಾ. ಮನೆಗೆ ಒಡೆಯನಾಗುವ ತಾಕತ್ತಿಲ್ಲದವ ದೇಶವನ್ನು ಹೇಗೆ ಆಳಬಲ್ಲ ಎಂದು ಪ್ರಶ್ನಿಸಿದರು.
ಎಸ್‍ಡಿಪಿಐಯ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಎಸ್‍ಡಿಪಿಐಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಇಬ್ರಾಹೀಂ ಸಾಗರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಮುಖಂಡರಾದ ಅಬ್ದುಲ್ ರಝಾಕ್ ಸೀಮಾ, ಜಾಫರ್ ಸಾದಿಕ್ ಫೈಝಿ, ಹನೀಫ್ ಪೂಂಜಾಲಕಟ್ಟೆ, ಸಿದ್ದೀಕ್ ಕೆ.ಎ., ಫೈಸಲ್ ಮೂರುಗೋಳಿ, ಮುಸ್ತಫಾ ಮುಸ್ಲಿಯಾರ್, ಬದ್ರುದ್ದೀನ್ ಪುಣಚ, ಮೈಸೀಂ ಇಬ್ರಾಹೀಂ, ಟಿ.ಎಸ್. ಹನೀಫ್, ಹಮೀದ್ ಮೆಜೆಸ್ಟಿಕ್, ರಶೀದ್ ಮಠ, ರಫೀಕ್ ಸವಣೂರು, ಅಶ್ರಫ್ ಕೂರ್ನಡ್ಕ, ಪಿಬಿಕೆ ಮುಹಮ್ಮದ್, ಅನ್ವರ್ ಪೆರುವಾಯಿ, ಬಶೀರ್ ಆತೂರು, ಇನಾಸ್ ರೊಡ್ರಿಗಸ್, ಮಜೀದ್ ಮಠ ದಲಿತ ಸಂಘಟನೆಯ ವಿಶ್ವನಾಥ ಪುಣ್ಚತ್ತಾರು, ಬಾಬು ಸವಣೂರು ಮತ್ತಿತರರು ಉಪಸ್ಥಿತರಿದ್ದರು.
ಶಾಕೀರ್ ಅಳಕೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಝಕಾರಿಯಾ ಕೊಡಿಪ್ಪಾಡಿ ವಂದಿಸಿದರು.
ಮೊದಲಿಗೆ ಅರ್ಧ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪ್ರತಿಭಟನಕಾರರು ಕೊನೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಕೆಲ ನಿಮಿಷಗಳ ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪೋಟೋ: 27ಯುಪಿಪಿಪ್ರೊಟೆಸ್ಟ್