ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಸನ್ಮಾನ
ಮಂಗಳೂರು, ಸೆ.27: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಮಂಗಳೂರು ಶಾಖೆಯ ವತಿಯಿಂದ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಡಿಷನಲ್ ಕಮಿಷನರ್ ಆಫ್ ಇಂಕಮ್ ಟ್ಯಾಕ್ಸ್ ರೇಂಜ್ 1 ಆಗಿರುವ ಕೆ.ಎ. ಚಂದ್ರಕುಮಾರ್ ಹಾಗು ಅಡಿಷನಲ್ ಕಮಿಷನರ್ ಆರ್‌ಇಎಫ್‌ಎಸಿ ವೆರಿಫಿಕೇಷನ್ ಯುನಿಟ್ ಪಿ. ಸುರೇಶ್ ರಾವ್ ಅವನರನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೆ.ಎ. ಚಂದ್ರಕುಮಾರ್ ಲೆಕ್ಕಪರಿಶೋಧಕರು ಆದಾಯ ತೆರಿಗೆ ಇಲಾಖೆ ಮತ್ತು ತೆರಿಗೆ ಪಾವತಿದಾರ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ. ಸಮಾಜಕ್ಕೆ ಅವರ ಕೊಡುಗೆ ಅಪೂರ್ವ ಎಂದು ತಿಳಿಸಿದರು.
ಪಿ. ಸುರೇಶ್ ರಾವ್ ಮಾತನಾಡಿ ಇಂದಿನ ದಿನಗಳಲ್ಲಿ ಆದಾಯ ತೆರಿಗೆ ಫೇಸ್‌ಲೆಸ್ ಆಗಿದೆ. ಎಲ್ಲಾ ತೆರಿಗೆ ವಿಚಾರಗಳು ಆನ್‌ಲೈನ್ ಮೂಲಕ ರವಾನೆ ಆಗುತ್ತಿವೆ. ಲೆಕ್ಕಪರಿಶೋಧಕರು, ಈ ನಿಟ್ಟಿನಲ್ಲಿ ತೆರಿಗೆ ಪಾವತಿದಾರರಿಗೆ ನೆರವು ನೀಡಬೇಕು ಎಂದು ಹೇಳಿದರು.
ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಕೆ.ಎಸ್. ಕಾಮತ್, ನಿಕಟಪೂರ್ವ ಅಧ್ಯಕ್ಷ ಸಿಎ ಎಸ್‌ಎಸ್ ನಾಯಕ್, ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಉಪಸ್ಥಿತರಿದ್ದರು.