×
Ad

ಹೆಬ್ರಿ: ನಮ್ಮ ನಾಡ ಒಕ್ಕೂಟದಿಂದ ಪ್ರತಿಭಾ ಪುರಸ್ಕಾರ

Update: 2021-09-28 16:15 IST

ಹೆಬ್ರಿ, ಸೆ.28: ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ವತಿಯಿಂದ ಕಳೆದ ಸಾಲಿನ ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಅಂಕಗಳನ್ನು ಗಳಿಸಿದ ಘಟಕ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸೆಸೆಲ್ಸಿ ವಿದ್ಯಾರ್ಥಿಗಳಾದ ರಾಯಿಸಾ ಪುತ್ತಿಗೆ, ಶೆರಿನ್  ಪೆರ್ಡೂರು, ಆಯಿಷಾ ಅರಿಶ್ಮಾ ಹಾಲಾಡಿ, ಆಯಿಶತುಲ್ ಬುಶ್ರಾ ಶಿರ್ಲಾಲು ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಲತೀಫಾ ರಫಾ ಹಾಲಾಡಿ, ನಿಶಾ ನಾಝ್ ಹೈಕಾಡಿ, ಅನಿಷಾ ಫಾತಿಮಾ ಎಣ್ಣೆಹೊಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು ಮಾತನಾಡಿ ಶುಭ ಹಾರೈಸಿದರು.

ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಉಪಾಧ್ಯಕ್ಷರಾಗಿರುವ ಸಿ.ಕೆ.ಅನ್ವರ್ ಹಾಲಾಡಿ, ನಝೀರ್ ಶಾ ಅಜೆಕಾರು, ಅಬು ಮುಹಮ್ಮದ್ ಕುಂದಾಪುರ, ಸದಸ್ಯರಾದ ಸಗೀರ್ ಹೈಕಾಡಿ, ಸಲೀಂ ಪುತ್ತಿಗೆ, ಹೆಬ್ರಿ ಘಟಕದ ಉಪಾಧ್ಯಕ್ಷ ಅಬ್ದುಸ್ಸಮದ್ ಹೈಕಾಡಿ, ಸಲಹೆಗಾರರಾದ ಹೈದರ್ ಎಣ್ಣೆಹೊಳೆ, ಪಿ.ಕೆ.ಅಹ್ಮದ್ ಪುತ್ತಿಗೆ, ಕಾರ್ಯದರ್ಶಿ ಅರಾಫತ್ ಬೆಳ್ವೆ,   ಸಂಚಾಲಕ ಆಸಿಫ್ ಹೈಕಾಡಿ, ಸದಸ್ಯರಾದ ಮುನವ್ವರ್ ಅಜೆಕಾರು, ನವಾಬ್ ಸಿವಿಲ್ ಇಂಜಿನಿಯರ್, ಕಾರ್ಕಳ ಘಟಕದ ಅಧ್ಯಕ್ಷ ಶಾಕಿರ್ ಹುಸೇನ್ ಶಿಷಾ, ಎಣ್ಣೆಹೊಳೆ ಮಸೀದಿಯ ಕಮಿಟಿ ಪ್ರತಿನಿಧಿಗಳು, ಶಿರ್ಲಾಲು ಮಸೀದಿಯ ಆಡಳಿತ ಕಮಿಟಿ, ಪೆರ್ಡೂರು ಮಸೀದಿಯ ಆಡಳಿತ ಕಮಿಟಿ, ಹೈಕಾಡಿ ಮಸೀದಿಯ ಆಡಳಿತ ಕಮಿಟಿ, ಹಾಲಾಡಿ ಮಸೀದಿಯ ಕಮಿಟಿ ಪ್ರತಿನಿಧಿಗಳು, ಎಣ್ಣೆಹೊಳೆ, ಶಿರ್ಲಾಲು, ಪೆರ್ಡೂರು, ಹೈಕಾಡಿ ಇಲ್ಲಿನ ಮಸೀದಿಯ ಇಮಾಮರುಗಳು ಹಾಗೂ ಸ್ಥಳೀಯ ಶೈಕ್ಷಣಿಕ ಅಭಿಮಾನಿಗಳು,ನಮ್ಮ ನಾಡ ಒಕ್ಕೂಟದ ಸದಸ್ಯರು ಹಾಗೂ ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್  ಬೆಳ್ವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News