×
Ad

ನವಜೋತ್‌ ಸಿಂಗ್‌ ಸಿಧುರೊಂದಿಗೆ ಸಹಮತ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಝಿಯಾ ಸುಲ್ತಾನಾ

Update: 2021-09-28 18:59 IST
Photo: ANI

ಹೊಸದಿಲ್ಲಿ: ಪಂಜಾಬ್‌ ರಾಜ್ಯದಲ್ಲಿ ಕೆಲಕಾಲಗಳಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದ ಅಸಮಾಧಾನವು ಭುಗಿಲೆದ್ದು ಅಮರಿಂದರ್‌ ಸಿಂಗ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಂದು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ನೀಡಿದ್ದರು. ಇದೀಗ ಸಿಧುರನ್ನು ಬೆಂಬಲಿಸಿ ಸಚಿವೆ ರಝಿಯಾ ಸುಲ್ತಾನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಚನ್ನಿ ಸಂಪುಟದಲ್ಲಿ ಸ್ಥಾನ ಪಡೆದು ಸಚಿವೆಯಾಗಿದ್ದ ರಝಿಯಾ ಸುಲ್ತಾನಾ, ತಾನು ನವಜೋತ್‌ ಸಿಂಗ್‌ ರೊಂದಿಗೆ ಸಹಮತ ಸೂಚಿಸುವ ಸಲುವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸಿಧು ಸಾಬ್‌ ಸಿದ್ಧಾಂತವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರು ಪಂಜಾಬ್‌ ಮತ್ತು ಪಂಜಾಬಿಯತ್‌ ಗಾಗಿ ಹೋರಾಡುತ್ತಿದ್ದಾರೆ" ಎಂದು ರಝಿಯಾ ತಿಳಿಸಿದ್ದಾಗಿ ANI  ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News