×
Ad

ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Update: 2021-09-28 19:56 IST

ಉಡುಪಿ, ಸೆ.28: ಅಂತಾರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನಾಚರಣೆ ಅಂಗವಾಗಿ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರವು ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

18 ವರ್ಷ ಮೇಲ್ಪಟ್ಟ ಆಸಕ್ತ ಅಭ್ಯರ್ಥಿಗಳು ತಮ್ಮ ಪ್ರಬಂದಗಳನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ನ.15ರೊಳಗೆ ಕಳುಹಿಸಿಕೊಡಬಹುದು. ಪ್ರಬಂಧವನ್ನು ಟೈಪ್ ಮಾಡಿ ಇ-ಮೈಲ್ ಮೂಲಕ ವರ್ಡ್‌ಫೈಲ್ ಡಾಕ್ಯುಮೆಂಟ್ ಮಾಡಿ -atiessaycompetition@gmail.com -ಗೆ ಅಥವಾ ಕೈಬರಹದ ಪ್ರಬಂದಗಳನ್ನು ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಲಲಿತ ಮಹಲ್ ರಸ್ತೆ ಮೈಸೂರು -570011 ಈ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ-https://atimysore.gov.in/-ಅಥವಾ ಮೊ.ನಂ: 9740768931/9901212215ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News