×
Ad

ನಿಮ್ಮ ರಾಜೀನಾಮೆಯಿಂದ ಎಡ ಸಂಘಟನೆಗಳ ಭವಿಷ್ಯ ಮಂಕಾಗುತ್ತದೆಯೇ? ಎಂಬ ಪ್ರಶ್ನೆಗೆ ಕನ್ಹಯ್ಯ ನೀಡಿದ ಉತ್ತರ ಹೀಗಿದೆ...

Update: 2021-09-28 21:02 IST
Photo: Twitter

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಸಮ್ಮುಖದಲ್ಲಿ ಯುವ ನಾಯಕರಾದ ಕನ್ಹಯ್ಯ ಕುಮಾರ್‌ ಹಾಗೂ ಜಿಗ್ನೇಶ್‌ ಮೆವಾನಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಜಿಗ್ನೇಶ್‌ ಮೆವಾನಿ ಹಾಗೂ ಕನ್ಹಯ್ಯ ಕುಮಾರ್‌ ಮಾತನಾಡಿದರು.

ನಿಮ್ಮ ರಾಜೀನಾಮೆಯಿಂದ ಎಡಪರ ಸಂಘಟನೆಗಳ ಭವಿಷ್ಯಕ್ಕೆ ತೊಂದರೆಯುಂಟಾಗುತ್ತದೆಯಲ್ಲವೇ? ಎಂದು ಪತ್ರಕರ್ತರೋರ್ವರು ಕೇಳಿದ ಪ್ರಶ್ನೆ ಉತ್ತರಿಸಿದ ಕನ್ಹಯ್ಯ ಕುಮಾರ್‌ " ಎಡರಂಗದ ಭವಿಷ್ಯ ಹಾಳಾಗುತ್ತದೆಯೇ? ಎಂದು ನೀವೊಂದು ವೈಚಾರಿಕ ಪ್ರಶ್ನೆಯನ್ನು ಕೇಳಿದ್ದೀರಿ. ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ ಆದರೆ ಸಂಘಟನೆಗೆ, ಸಿದ್ಧಾಂತಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ."

"ಸಂಘಟನೆಯು ಯಾವತ್ತೂ ವ್ಯಕ್ತಿಗಳಿಗಿಂತಲೂ ಉನ್ನತವಾಗಿರುತ್ತದೆ. ಇವತ್ತು ನಾನು ಯಾವ ಪಕ್ಷದಿಂದ ಹೊರ ಬರುತ್ತಿದ್ದೇನೆಯೋ, ಅದೇ ಪಕ್ಷದಲ್ಲಿ ನಾನು ಬೆಳೆದಿದ್ದೇನೆ. ಅಲ್ಲಿ ನನ್ನಂತಹ ಹಲವಾರು ಯುವಕರಿದ್ದಾರೆ. ಅಲ್ಲಿ ನೀಡುವ ತರಬೇತಿಯೇ ಅಂತಹದ್ದು. ಈ ವಿಚಾರದಲ್ಲಿ ನನಗೆ ಹೆಮ್ಮೆಯಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಇದು ದೇಶದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಜಾಪ್ರಭುತ್ವ ಪಕ್ಷ, ಮತ್ತು ನಾನು 'ಪ್ರಜಾಪ್ರಭುತ್ವ'ಕ್ಕೆ ಒತ್ತು ನೀಡುತ್ತಿದ್ದೇನೆ ... ನಾನು ಮಾತ್ರವಲ್ಲ, ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ, "ಎಂದು ಹೇಳಿದರು.

"ನಾನು ಯಾವ ಪಕ್ಷದಲ್ಲಿ ಬೆಳೆದಿದ್ದೇನೋ, ಯಾವ ಪಕ್ಷ ನನ್ನನ್ನು ಬೆಳೆಸಿದೆಯೋ, ಆ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಅದು ನನಗೆ ಕಲಿಯುವಂತೆ, ಹೋರಾಡುವಂತೆ ಪ್ರೇರೇಪಿಸಿತು. ಇದರ ಜೊತೆಗೆ ನನಗಾಗಿ ವಾಟ್ಸಾಪ್‌ ಗ್ರೂಪ್‌ ಗಳಲ್ಲಿ, ಮನೆಯ ಡಿನ್ನರ್‌ ಟೇಬಲ್‌ ಗಳಲ್ಲಿ ಧ್ವನಿಯೆತ್ತಿದ ನನ್ನ ಅಸಂಖ್ಯಾತ ಸ್ನೇಹಿತರಿಗೆ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ" ಎಂದು ಕನ್ಹಯ್ಯ ಕುಮಾರ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News