ಸೆ.30ರಂದು ಯಕ್ಷಗಾನ ಕಲಾರಂಗದಿಂದ 21ನೇ ಮನೆ ಹಸ್ತಾಂತರ
ಉಡುಪಿ, ಸೆ.28: ಯಕ್ಷಗಾನ ಕಲಾರಂಗ ದಾನಿಗಳ ನೆರನಿಂದ ಬಡ ಯಕ್ಷಗಾನ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟಿರುವ 21ನೇ ಮನೆಯ ಹಸ್ತಾಂತರ ಸೆ.30ರಂದು ಸಂಜೆ 5 ಗಂಟೆಗೆ ಮಂದಾರ್ತಿಯಲ್ಲಿ ನಡೆಯಲಿದೆ.
ಯಕ್ಷಗಾನ ಕಲಾವಿದರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿ ಸುವ ಯಕ್ಷಗಾನ ಕಲಾರಂಗ ಈವರೆಗೆ 20 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಇದೀಗ 21ನೇ ಮನೆಯನ್ನು ಮಂದಾರ್ತಿ ಮೇಳದ ಕಲಾವಿದ ಚಂದ್ರ ನಾಯ್ಕ ಹಾಗೂ ಅವರ ಪುತ್ರಿಯರಾದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸಂಗೀತ ಮತ್ತು ವಿದ್ಯಾಪೋಷಕ್ ವಿದ್ಯಾರ್ಥಿನಿ ಗೀತಾ ಇವರಿಗೆ ನಿರ್ಮಿಸಲಾಗಿದೆ ಎಂದು ಯಕ್ಷಗಾನ ಕಲಾರಂಗ ತಿಳಿಸಿದೆ.
ಸಂಸ್ಥೆಯ 21ನೇ ಮನೆ ‘ರಾಜೀವ ಸದನ’ದ ಉದ್ಘಾಟನೆ ಮಂದಾರ್ತಿಯಲ್ಲಿ ಗುರುವಾರ ಸಂಜೆ ನಡೆಯಲಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಎಚ್. ಎಸ್. ಶೆಟ್ಟಿ ಇವರು ಮನೆಯನ್ನು ಉದ್ಘಾಟಿಸಲಿದ್ದಾರೆ. ಮಂದಾರ್ತಿ ದೇವಳದ ಆನುವಂಶಿಕ ಮುಕ್ತೇಸರರಾದ ಎಚ್. ಧನಂಜಯ ಶೆಟ್ಟಿ ಹಾಗೂ ಲಕ್ಷೀ ಫೀಡ್ಸ್‌ನ ಮಾಲಕ ಕೆ.ಮಹೇಶ್ ಉಡುಪ ಉಪಸ್ಥಿತರಿರುವರು ಎಂದು ಯಕ್ಷಗಾನ ಕಲಾರಂಗದ ಅಧ್ಷಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.