ವಾಹನ ಢಿಕ್ಕಿ: ಪಾದಚಾರಿ ಯುವಕ ಮೃತ್ಯು
Update: 2021-09-28 21:29 IST
ಕಾಪು, ಸೆ.28: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗುತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ 1ರಿಂದ 2ಗಂಟೆ ನಡುವೆ ಕಟಪಾಡಿ ಏಣಗುಡ್ಡೆ ಗ್ರಾಮದ ಕಿಯಾ ಶೋರೂಮ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಕಾಪು ಪಡುಗ್ರಾಮದ ಗುಲಾಬಿ ನಿವಾಸದ ಗಿರೀಶ್ ಎಂದು ಗುರುತಿಸಲಾಗಿದೆ. ಮೀನುಗಾರಿಕಾ ವೃತ್ತಿಯ ಇವರು ಸೋಮವಾರ ಹೆಂಡತಿ ಮನೆಯಿಂದ ಮೀನುಗಾರಿಕೆಗೆಂದು ತೆರಳಲು ನಡೆದುಕೊಂಡು ಬರುತಿದ್ದಾಗ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.